Green Sunday #563
Adamya Green #563 ಹಸಿರು ಹೆಜ್ಜೆಗಳಿಂದ ಆರೋಗ್ಯಕರ ಸಮಾಜದತ್ತ… ಪರಿಸರ ಸಂರಕ್ಷಣೆಯ ಸಂಕಲ್ಪದೊಂದಿಗೆ, ಅದಮ್ಯ ಚೇತನದ ‘‘563ನೇ ಹಸಿರು ಭಾನುವಾರ’ ಕಾರ್ಯಕ್ರಮವು ಬೆಂಗಳೂರಿನ ಹೊಸಕೆರೆಹಳ್ಳಿಯ ಗಿರಿನಗರದಲ್ಲಿರುವ ಸಾಯಿ ಪುಷ್ಪಾಂಜಲಿ ಪಾರ್ಕ್ನಲ್ಲಿ ಯಶಸ್ವಿಯಾಗಿ ನೆರವೇರಿತು. ಪ್ರಕೃತಿಯ ಮಡಿಲಲ್ಲಿ ಹಸಿರಿನ ಮಹತ್ವವನ್ನು ಸಾರುತ್ತಾ, ಪರಿಸರದ ಬಗ್ಗೆ ಜಾಗೃತಿ ಮೂಡಿಸುವ ಹಾಗೂ ಸುಸ್ಥಿರ ಜೀವನಶೈಲಿಗೆ ಪ್ರೇರಣೆ ನೀಡುವ ಈ ಅಭಿಯಾನ ಮತ್ತೊಂದು ಅರ್ಥಪೂರ್ಣ ಹೆಜ್ಜೆಯನ್ನಿಟ್ಟಿದೆ. ಪ್ರಕೃತಿಯನ್ನು ಉಳಿಸುವುದು ಕೇವಲ ನಮ್ಮ ಕರ್ತವ್ಯವಲ್ಲ, ಅದು ಮುಂದಿನ ಪೀಳಿಗೆಗೆ ನಾವು ನೀಡುವ ಅಮೂಲ್ಯ ಕೊಡುಗೆ.









