Adamya Chetana

Ananta Chetana Wall Magzine
ಅನಂತ ಚೇತನ ಗೋಡೆ ಪತ್ರಿಕೆ

Ananta Chetana: Wall Magzine

A newspaper on the wall…
“Chinnara Chetana” is now “Ananta Chetana”. Since 2008, this colourful wall magazine has been brightening the walls of hundreds of schools across Karnataka, and its latest issue is now reaching schools. Seeing students read it with such interest and joy is the truest measure of this effort’s success.

ಅನಂತ ಚೇತನ ಗೋಡೆ ಪತ್ರಿಕೆ :

ಗೋಡೆಯ ಮೇಲೊಂದು ಪತ್ರಿಕೆ…
“ಚಿಣ್ಣರ ಚೇತನ” ಈಗ “ಅನಂತ ಚೇತನ”. 2008ರಿಂದ ಕರ್ನಾಟಕದ ನೂರಾರು ಶಾಲೆಗಳ ಗೋಡೆಗಳನ್ನು ಅಲಂಕರಿಸುತ್ತಿರುವ ಈ ವರ್ಣರಂಜಿತ ಗೋಡೆ ಪತ್ರಿಕೆಯ ನೂತನ ಸಂಚಿಕೆ ಇದೀಗ ಶಾಲೆಗಳನ್ನು ತಲುಪುತ್ತಿದೆ.
ಶಾಲಾ ಆವರಣದಲ್ಲಿ ಪ್ರದರ್ಶಿತವಾದ ಸಂಚಿಕೆಯನ್ನು ವಿದ್ಯಾರ್ಥಿಗಳು ಅತ್ಯಂತ ಆಸಕ್ತಿ ಹಾಗೂ ಸಂತಸದಿಂದ ಓದುತ್ತಿರುವುದು ಈ ಪ್ರಯತ್ನದ ಸಾರ್ಥಕತೆಗೆ ಸಾಕ್ಷಿಯಾಗಿದೆ.

ಶಾಲಾ ಮಕ್ಕಳಿಗಾಗಿ 2008ರಲ್ಲಿ ಆರಂಭಗೊಂಡು, ಕಳೆದ ಹದಿನೈದಕ್ಕೂ ಹೆಚ್ಚು ವರ್ಷಗಳಿಂದ ಕರ್ನಾಟಕದ ನೂರಾರು ಶಾಲೆಗಳ ಗೋಡೆಗಳನ್ನು ಅಲಂಕರಿಸುತ್ತಾ ಬಂದಿರುವ ವರ್ಣರಂಜಿತ ಗೋಡೆ ಪತ್ರಿಕೆ “ಚಿಣ್ಣರ ಚೇತನ”ಕ್ಕೆ ಇದೀಗ “ಅನಂತ ಚೇತನ” ಎಂಬ ಹೊಸ ಹೆಸರನ್ನು ನೀಡಲಾಗಿದ್ದು, ಈ ನೂತನ ಸಂಚಿಕೆಯು 2026ರ ಆಗಸ್ಟ್ 29ರಂದು ಬಿಡುಗಡೆಗೊಂಡಿದೆ.

ವಿಜ್ಞಾನ, ಪರಿಸರ, ಪ್ರಕೃತಿ, ಸಂಸ್ಕೃತಿ ಹಾಗೂ ಕಲೆಯಂತಹ ವೈವಿಧ್ಯಮಯ ವಿಷಯಗಳನ್ನೊಳಗೊಂಡ ಈ ಸಂಗ್ರಹಯೋಗ್ಯ ಪತ್ರಿಕೆಯು ಸಕಾರಾತ್ಮಕ ವಿಚಾರಗಳನ್ನು ಶಿಕ್ಷಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ತಲುಪಿಸುತ್ತಿದೆ.

ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಪೂರಕವಾಗಿ ಅವರ ಸಾಮಾನ್ಯ ಜ್ಞಾನವನ್ನು ವೃದ್ಧಿಸುವ ಪ್ರಮುಖ ಉದ್ದೇಶ ಹೊಂದಿರುವ ಈ ಗೋಡೆ ಪತ್ರಿಕೆಯನ್ನು ಶಾಲಾ ಆವರಣದಲ್ಲಿ ಪ್ರದರ್ಶಿಸುವ ಮೂಲಕ, ಗರಿಷ್ಠ ಸಂಖ್ಯೆಯ ಮಕ್ಕಳನ್ನು ತಲುಪುವ ಒಂದು ವಿಶಿಷ್ಟ ಹಾಗೂ ಅರ್ಥಪೂರ್ಣ ಪ್ರಯತ್ನ ಇದಾಗಿದೆ.

Read More

Wall Posters

March 2025

Feb 2025

Dec 2024
Jan 2025

Nov- Dec 2024

October 2024

Sept 2024

August 2024

July 2024

June 2024

February 2024

January 2024

December 2023