Adamya Chetana

Nitya Annadaan
ನಿತ್ಯ ಅನ್ನದಾನ

Nitya Annadaana

अन्नदानात्परं दानं न भूतो न भविष्यति |
अन्नेन धार्यते सर्वं जगदेतच्चराचरं ||

No one - be it students or the poor, from any caste or creed – should go hungry. With this philosophy, Adamya Chetana serves free food every afternoon. This was started during COVID in November 2020 looking at the severe hardships many people, particularly the elderly were facing. It started with serving food near Adamya Chetana. Later on, this was expanded to serve food at Jayanagar, Marenahalli, RR Nagar and Nagareshwar temple. Every day, 500 - 600 people partake the mid-day meals across these 5 locations in Bengaluru.

On the 2nd Punyatithi of Sri AnanthKumar ji, at Adamya Chetana we have started the noble cause of feeding the needy every afternoon. Anyone, who is in need of food can walk into Adamya Chetana and have his lunch between 1:00 pm and 2:00 pm 365 days.

You can participate in the following ways:

“No one should go hungry” – Adamya Chetana believes in this principle and serves free food every afternoon to the needy across all castes and creeds. Originally initiated during the COVID-19 pandemic in November 2020 to address the hardships faced by many, especially the elderly. Currently, Nitya Annadana is being served at Bengsaluru (5 locations), Jodhpur (2 locations), Hubballi, Kalaburagi and Ayodhya. Across these Ten locations over 2000 people are fed sumptuous & nourishing meals every day.

ಶಾಲಾ ಮಕ್ಕಳಿರಲಿ, ದೀನದಲಿತರಿರಲಿ, ಯಾವುದೇ ಜಾತಿ ವರ್ಗಕ್ಕೆ ಸೇರಿದವರಾಗಿರಲಿ, ಹಸಿದುಕೊಂಡು ದಿನದೂಡುವ ಸ್ಥಿತಿ ಒದಗಬಾರದು, ಈ ಚಿಂತನೆಯ ಮೂಲಕ ಅದಮ್ಯಚೇತನ ಸಂಸ್ಥೆಯ ವತಿಯಿಂದ ಪ್ರತಿನಿತ್ಯ ಮಧ್ಯಾಹ್ನದ ವೇಳೆಯಲ್ಲಿ ಅನ್ನದಾನದ ವ್ಯವಸ್ಥೆ ಮಾಡಲಾಗುತ್ತಿದೆ. ಕೋವಿಡ್ ಸಂದರ್ಭದಲ್ಲಿ ಬಹಳಷ್ಟು ಜನರಿಗೆ ಅದರಲ್ಲೂ ವಿಶೇಷವಾಗಿ ಹಿರಿಯ ನಾಗರಿಕರ ಕಷ್ಟಕರ ಪರಿಸ್ಥಿತಿಯನ್ನು ಅರಿತು ೨೦೨೦ ನವೆಂಬ‍ರ್‌ನಿoದ ನಿತ್ಯ ಅನ್ನದಾನ ಪ್ರಾರಂಭ ಮಾಡಲಾಗಿದೆ. ಪ್ರಾರಂಭದಲ್ಲಿ ಅದಮ್ಯ ಚೇತನ, ಗವಿಪುರದ ಅಡುಗೆ ಮನೆಯ ಪಕ್ಕದಲ್ಲಿ ಆರಂಭವಾಗಿದ್ದು, ನಂತರದ ದಿನಗಳಲ್ಲಿ ಜಯನಗರ, ಮಾರೇನಹಳ್ಳಿ, ಆರ್.ಆರ್.ನಗರ, ನಗರೇಶ್ವರ ದೇವಸ್ಥಾನ ಮತ್ತು ಹುಬ್ಬಳ್ಳಿ, ಕಲಬುರಗಿ ಹಾಗೂ ಎಂ.ಜಿ.ಎಂ ಆಸ್ಪತ್ರೆ ಹಾಗೂ ಉಮೇದ್ ಆಸ್ಪತ್ರೆ ಜೋಧಪುರ(ರಾಜಸ್ಥಾನ), ಶ್ರೀರಾಮಜನ್ಮ ಭೂಮಿ ಅಯೋಧ್ಯೆಯಲ್ಲೂ ನಿತ್ಯ ಅನ್ನದಾನ ಮುಂದುವರೆಯುತ್ತಿದೆ. ಹೀಗೆ ಒಟ್ಟು 10 ಸ್ಥಳಗಳಲ್ಲಿ ನಿತ್ಯ ಅನ್ನದಾನ ನಡೆಸಲಾಗುತ್ತಿದೆ. ಪ್ರತಿನಿತ್ಯ ಒಟ್ಟು 2000 ಜನರು ಊಟವನ್ನು ಸೇವಿಸುತ್ತಿದ್ದಾರೆ.
ಅಯೋಧ್ಯೆಯಲ್ಲಿ ಅದಮ್ಯ ಚೇತನದ ಅನ್ನದಾನ ಸೇವೆ : ಅಯೋಧ್ಯೆಯ ರಾಮಮಂದಿರ ಪ್ರಾಣ ಪ್ರತಿಷ್ಠಾಪನೆಯ ಸುಸಂದರ್ಭದಲ್ಲಿ ಪ್ರಾರಂಭವಾದ ಅನ್ನದಾನ ಸೇವೆಯು ಸ್ಥಳೀಯ ಅವಶ್ಯವಿರುವವರಿಗೆ ಹಾಗೂ ಅಯೋಧ್ಯೆಗೆ ಆಗಮಿಸುವ ಯಾತ್ರಿಕರಿಗೆ ನೆರವಾಗಲಿದೆ. ದಕ್ಷಿಣ ಭಾರತದ ರುಚಿ ಶುಚಿಯಾದ ತಿಂಡಿ, ಊಟ(ಇಡ್ಲಿ, ಸಾಂಬಾರ್, ಬಿಸಿಬೇಳೆಬಾತ್, ಪೊಂಗಲ್…) ಅದಮ್ಯ ಚೇತನದ ತನ್ನ ಅಡುಗೆಮನೆಯಿಂದ ತಯಾರಾಗುತ್ತಿದೆ. ಅಯೋಧ್ಯೆಯಲ್ಲಿ ನಡೆಯುತ್ತಿರುವ ಅಡುಗೆಮನೆಯೂ ಸಹ ಕಸರಹಿತ ಅಡುಗೆಮನೆಯಾಗಿರುವುದು ವಿಶೇಷ.
ಅದಮ್ಯ ಚೇತನದ ಮತ್ತೊಂದು ಪ್ರಮುಖ ಯೋಜನೆ – ಅಗತ್ಯವಿದ್ದವರಿಗೆ ನಿತ್ಯ ಅನ್ನದಾನ.
ಕಲಬುರ್ಗಿಯಲ್ಲಿ ಪ್ರಾರಂಭವಾದ ನಿತ್ಯ ಅನ್ನದಾನ ಯೋಜನೆಯು ಭಿನ್ನ ರೀತಿಯ ಸೇವಾ ಕಾರ್ಯಕ್ರಮವಾಗಿದ್ದು, ಹಸಿದವರಿಗೆ ಊಟ ಒದಗಿಸುವ ಮೂಲಕ ನಿರಂತರ ಸಹಾಯ ಮಾಡುತ್ತದೆ. ಯಾವೊಬ್ಬರೂ ಹಸಿವಿನಿಂದ ಬಳಲಬಾರದು ಎಂಬ ಧ್ಯೇಯದೊಂದಿಗೆ, ಈ ಅಭಿಯಾನವು ನಿರಂತರ ಸೇವೆಯಲ್ಲಿ ಮುಂದುವರೆಯಲಿದೆ.
ಈ ಕಾರ್ಯಕ್ರಮದಲ್ಲಿ ನಮ್ಮೊಂದಿಗೆ ಕೈ ಜೋಡಿಸಲು ರೂ. 1000 ಸಹಾಯಧನ ನೀಡುವ ಮೂಲಕ ಅಗತ್ಯವಿದ್ದವರಿಗೆ ಊಟ ಒದಗಿಸುವಲ್ಲಿ ನೀವೂ ಪಾಲ್ಗೊಳ್ಳಬಹುದಾಗಿದೆ. 
ಗವಿಪುರದ ಅದಮ್ಯ ಚೇತನ ಸಂಸ್ಥೆ ವತಿಯಿಂದ ಎಲ್ಲರ ಸಹಕಾರದೊಂದಿಗೆ ಬೆಂಗಳೂರಿನ ವಿವಿಧೆಡೆಯಲ್ಲಿ ನಿತ್ಯ ಅನ್ನದಾನ!
ಬನ್ನಿ, ನಮ್ಮ ಜೊತೆ ಕೈಜೋಡಿಸಿ, ಬೆಂಬಲಿಸಿ.

ಅದಮ್ಯ ಚೇತನ ವತಿಯಿಂದ ನಗರದ ಗವಿಪುರಂ ಮತ್ತು ನಗರ್ತಪೇಟೆಯಲ್ಲಿ ನಿತ್ಯಅನ್ನದಾನ

ಅದಮ್ಯ ಚೇತನ ಸಂಸ್ಥೆ ವತಿಯಿಂದ ಪ್ರತಿನಿತ್ಯ ಬೆಂಗಳೂರಿನ ಗವಿಪುರಂ, ಹಲಸೂರು, ಅನಂತ ಸ್ಮೃತಿವನ, ಜಯನಗರ ಹಾಗೂ ನಗರ್ತಪೇಟೆಯಲ್ಲಿ ನೂರಾರು ಜನರಿಗೆ ಉಚಿತ ಭೋಜನ ನೀಡುತ್ತಿದ್ದು, ಈ ನಿತ್ಯ ಅನ್ನದಾನ ಉಪಕ್ರಮದ ಭಾಗವಾಗಲು ಅದಮ್ಯ ಚೇತನ ಸಂಸ್ಥೆಗೆ ಭೇಟಿ ನೀಡಿ.

ಗವಿಪುರದ ಅದಮ್ಯ ಚೇತನ ಸಂಸ್ಥೆಯಲ್ಲಿ ನಿತ್ಯ ಅನ್ನದಾನ- 1296ನೇ ಕಾರ್ಯಕ್ರಮ ನಿಮ್ಮ ಸಹಕಾರದ ಮೂಲಕ ಮತ್ತಷ್ಟು ಜನರಿಗೆ ನೆರವಾಗಬಹುದು.
ದಿ. ಶ್ರೀ ಅನಂತಕುಮಾರ್ ಅವರ ಅನ್ನ, ಅಕ್ಷರ, ಆರೋಗ್ಯ ಧ್ಯೇಯದಿಂದ ಪ್ರಾರಂಭವಾದ “ಅದಮ್ಯ ಚೇತನ” ಹಸಿದವರಿಗೆ ಊಟ ನೀಡುವ ನಿಟ್ಟಿನಲ್ಲಿ ಬೆಂಗಳೂರಿನ ಹಲವೆಡೆ “ನಿತ್ಯ ಅನ್ನದಾನ” ಕಾರ್ಯಕ್ರಮ ನಡೆಸಿಕೊಂಡು ಬರುತ್ತಿದೆ
ಇಂದು ಲಾಲ್ ಬಾಗ್ ಪಶ್ಚಿಮ ದ್ವಾರದ ಎದುರು ಇರುವ “ಅನಂತ ಸ್ಮೃತಿ ವನ”ದಲ್ಲಿ ಜರುಗಿದ ನಿತ್ಯ ಅನ್ನದಾನದ ಕ್ಷಣಗಳು.
ಅದಮ್ಯ ಚೇತನ ಸಂಸ್ಥೆಯ ವತಿಯಿಂದ ಲಾಲ್‌ ಬಾಗ್‌ ಪಶ್ಚಿಮ ದ್ವಾರ ಬಳಿಯ ಅನಂತಸ್ಮೃತಿ ವನದಲ್ಲಿ ನಿತ್ಯ ಅನ್ನದಾನ-208 ನೇ ದಿನದ ಅಂಗವಾಗಿ ಸಾರ್ವಜನಿಕರಿಗೆ ಪಲಾವ್, ಅನ್ನ, ಸಾಂಬಾರು, ಮಜ್ಜಿಗೆ ನೀಡಲಾಯಿತು.
 
ಅದಮ್ಯ ಚೇತನ ಸಂಸ್ಥೆಯ ವತಿಯಿಂದ ಲಾಲ್‌ ಬಾಗ್‌ ಪಶ್ಚಿಮ ದ್ವಾರ ಬಳಿಯ ಅನಂತಸ್ಮೃತಿ ವನದಲ್ಲಿ ನಿತ್ಯ ಅನ್ನದಾನ
ಅದಮ್ಯ ಚೇತನ ಸಂಸ್ಥೆಯ ವತಿಯಿಂದ ಲಾಲ್‌ ಬಾಗ್‌ ಪಶ್ಚಿಮ ದ್ವಾರ ಬಳಿಯ ಅನಂತಸ್ಮೃತಿ ವನದಲ್ಲಿ ನಿತ್ಯ ಅನ್ನದಾನ
ಗವಿಪುರದ ಅದಮ್ಯ ಚೇತನ ಸಂಸ್ಥೆಯಲ್ಲಿ ಇಂದು ನಡೆದ ನಿತ್ಯ ಅನ್ನದಾನ ಕಾರ್ಯಕ್ರಮ
ತಾತ್ಕಾಲಿಕ ಶೂನ್ಯ ತ್ಯಾಜ್ಯ ಅಡುಗೆ ಮನೆ ಮೂಲಕ ಅದಮ್ಯ ಚೇತನ ವತಿಯಿಂದ ಅಯೋಧ್ಯಾ ನಗರದಲ್ಲಿ ನಡೆಯುತ್ತಿರುವ ನಿತ್ಯ ಅನ್ನದಾನ..
ತಾತ್ಕಾಲಿಕ ಶೂನ್ಯ ತ್ಯಾಜ್ಯ ಅಡುಗೆ ಮನೆ ಮೂಲಕ ಅದಮ್ಯ ಚೇತನ ವತಿಯಿಂದ ಅಯೋಧ್ಯಾ ನಗರದಲ್ಲಿ ನಡೆಯುತ್ತಿರುವ ನಿತ್ಯ ಅನ್ನದಾನ..
“ಅಯೋಧ್ಯೆ ರಾಮಮಂದಿರ ಆವರಣದಲ್ಲಿ ಅದಮ್ಯ ಚೇತನದ ಅನನ್ಯ ಸೇವೆ”
ಒಂದು ತಿಂಗಳ ಕಾಲ ನಿತ್ಯವೂ ಒಂದು ಸಾವಿರ ಜನರಿಗೆ ಉಚಿತ ತಿಂಡಿ, ಊಟದ ವ್ಯವಸ್ಥೆಗೆ ತಾತ್ಕಾಲಿಕ ಅಡುಗೆ ಮನೆ ತೆರೆದಿದ್ದೇವೆ.