Adamya Green #566
ಕನ್ನಡ ರಾಜ್ಯೋತ್ಸವದ ಸಂಭ್ರಮದಲ್ಲಿ ಅದಮ್ಯ ಚೇತನದ 566ನೇ ಹಸಿರು ಭಾನುವಾರ!
ಕನ್ನಡ ನಾಡಿನ ಹಬ್ಬದ ಸಂಭ್ರಮದೊಂದಿಗೆ ಪರಿಸರ ಸಂರಕ್ಷಣೆಯ ಸಂದೇಶವನ್ನು ಸಾರುತ್ತಾ, ಅದಮ್ಯ ಚೇತನ ಸಂಸ್ಥೆಯ 566ನೇ ಹಸಿರು ಭಾನುವಾರ ಕಾರ್ಯಕ್ರಮವು ಬೆಂಗಳೂರಿನ ಜಟ್ಟಿಗರಹಳ್ಳಿ, ಬಿ.ಎಸ್.ಕೆ. 6ನೇ ಹಂತದ 10ನೇ ಬ್ಲಾಕ್ನ ಕನಕ ಭವನದ ಸಮೀಪವಿರುವ ಮುನೇಶ್ವರ ದೇವಸ್ಥಾನದ ಆವರಣದಲ್ಲಿ ಯಶಸ್ವಿಯಾಗಿ ನೆರೆವೇರಿತು.
ಅದಮ್ಯ ಚೇತನದ ಅಧ್ಯಕ್ಷೆ ಶ್ರೀಮತಿ ತೇಜಸ್ವಿನಿ ಅನಂತ್ ಕುಮಾರ್ ಅವರ ನೇತೃತ್ವದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ರಾಮಯ್ಯ ಅನ್ವಯಿಕ ವಿಜ್ಞಾನಗಳ ವಿಶ್ವವಿದ್ಯಾಲಯದ ರೊಟರಾಕ್ಟ್ ಕ್ಲಬ್ (Rotaract Club of RUAS) ಸದಸ್ಯರು ಹಾಗೂ ಅದಮ್ಯ ಚೇತನದ ಸ್ವಯಂಸೇವಕರು ಉತ್ಸಾಹದಿಂದ ಭಾಗವಹಿಸಿ, ಪರಿಸರ ಸಂರಕ್ಷಣೆ ಮತ್ತು ಹಸಿರು ಪರಿಸರದ ಮಹತ್ವದ ಕುರಿತು ಜಾಗೃತಿ ಮೂಡಿಸಿದರು.
ಕನ್ನಡ ನಾಡು, ನುಡಿ, ಸಂಸ್ಕೃತಿಯ ಅಭಿಮಾನವನ್ನು ಹಸಿರು ಪರಿಸರದ ಕಾಳಜಿಯೊಂದಿಗೆ ಬೆಸೆಯುವ ಮೂಲಕ ಕನ್ನಡ ರಾಜ್ಯೋತ್ಸವದ ಸಂಭ್ರಮಕ್ಕೆ ಮತ್ತಷ್ಟು ಅರ್ಥಪೂರ್ಣ ಮೆರುಗು ನೀಡಲಾಯಿತು.
ಹಸಿರು ಪರಿಸರವೇ ಸುಂದರ ಭವಿಷ್ಯದ ಅಡಿಪಾಯ. ಇಂದಿನ ನಮ್ಮ ಪುಟ್ಟ ಪ್ರಯತ್ನಗಳು ನಾಳಿನ ಪೀಳಿಗೆಗೆ ದೊಡ್ಡ ಕೊಡುಗೆಯಾಗಲಿ!
ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಕೈಜೋಡಿಸಿದ ರೊಟರಾಕ್ಟ್ ಕ್ಲಬ್ ನ ಸದಸ್ಯರು, ಸ್ವಯಂಸೇವಕರು ಹಾಗೂ ಎಲ್ಲ ಪರಿಸರ ಪ್ರೇಮಿಗಳಿಗೆ ಅದಮ್ಯ ಚೇತನದ ಹೃತ್ಪೂರ್ವಕ ಧನ್ಯವಾದಗಳು.
ಬನ್ನಿ, ಹಸಿರು ಪರಿಸರದ ನಿರ್ಮಾಣದಲ್ಲಿ ನಾವೆಲ್ಲರೂ ಕೈಜೋಡಿಸೋಣ!




