Adamya Chetana

Sharva Creative

Green Sunday #511

Adamya Green #511 “ಅದಮ್ಯ ಚೇತನದ ನಡಿಗೆ: ಪ್ರತೀ ಭಾನುವಾರ, ಹೊಸ ಸಸಿ, ಹೊಸ ಜಾಗೃತಿ” ಅದಮ್ಯ ಚೇತನದ 511ನೇ ‘ಹಸಿರು ಭಾನುವಾರ’ ಕಾರ್ಯಕ್ರಮವು ಅಕ್ಟೋಬರ್ 12 ರಂದು ಬೆಂಗಳೂರು ಯಶವಂತಪುರದ ರಾಷ್ಟ್ರೀಯ ಕೌಶಲ್ಯ ತರಬೇತಿ ಸಂಸ್ಥೆ, ಮಾಡರ್ನ್ ಬ್ರೆಡ್ ಫ್ಯಾಕ್ಟರಿ ಎದುರು ಯಶಸ್ವಿಯಾಗಿ ನಡೆಯಿತು. ಕಾರ್ಯಕ್ರಮದಲ್ಲಿ ಭಾಗವಹಿಸಿದವರು ಹಲವು ಸಸಿಗಳನ್ನು ನೆಟ್ಟು, ಅವುಗಳ ಪಾಲನೆಗಾಗಿ ಜವಾಬ್ದಾರಿಯನ್ನು ತೆಗೆದುಕೊಂಡರು. ಸಸ್ಯಾರೋಪಣೆಯ ಜೊತೆಗೆ ಪರಿಸರ ಜಾಗೃತಿ ಕುರಿತು ಚರ್ಚೆಗಳು, ಮಾರ್ಗದರ್ಶನ ಹಾಗೂ ಸಂವಾದ ಕಾರ್ಯಕ್ರಮಗಳೂ ನಡೆದವು. ಅದಮ್ಯ ಚೇತನ […]

Green Sunday #511 Read More »

Green Sunday #510

Adamya Green #510 “ಹಸಿರು ಭಾನುವಾರ, ಅನೇಕ ಗಿಡಗಳು, ಅನಂತ ಪ್ರೇರಣೆ!” ಅದಮ್ಯ ಚೇತನ ಸಂಸ್ಥೆಯ 510ನೇ ‘ಹಸಿರು ಭಾನುವಾರ’ ಕಾರ್ಯಕ್ರಮವು ಅಕ್ಟೋಬರ್ 5ರಂದು ಬಸವನಗುಡಿಯ ಬಿ.ಪಿ. ವಾಡಿಯಾ ರಸ್ತೆಯಲ್ಲಿರುವ ಅನಂತವನದಲ್ಲಿ ಯಶಸ್ವಿಯಾಗಿ ನಡೆಯಿತು. ಈ ಸಂದರ್ಭದಲ್ಲಿ ಸುಮಾರು ೧೦೦ ಗಿಡಗಳನ್ನು ಪುನಃ ನೆಡುವ (re-pot) ಕಾರ್ಯ ಕೈಗೊಳ್ಳಲಾಯಿತು. ಈ ಸಮೂಹ ಭಾಗವಹಿಸುವಿಕೆ ಹಸಿರು ಸಂಸ್ಕೃತಿ ಪೀಳಿಗೆಗಳಿಂದ ಪೀಳಿಗೆಗೆ ಸಾಗಬೇಕೆಂಬ ಸಂದೇಶವನ್ನು ಬಲಪಡಿಸಿದೆ. ಪ್ರತೀ ಭಾನುವಾರ ಗಿಡ ನೆಡುವ ಈ ಕಾರ್ಯಕ್ರಮವು ಒಂದು ಜೀವಂತ ಹಸಿರು ಚಳವಳಿಯಾಗಿದ್ದು,

Green Sunday #510 Read More »

Green Sunday #509

Adamya Green #509 ಅದಮ್ಯ ಚೇತನದ 509ನೇ ಹಸಿರು ಭಾನುವಾರ: ಹಸಿರೀಕರಣದ ಮತ್ತೊಂದು ಯಶಸ್ವಿ ಹೆಜ್ಜೆ ಸೆಪ್ಟೆಂಬರ್ 28, 2025 ರಂದು ಬೆಂಗಳೂರು ಬನ್ನೇರುಘಟ್ಟ ರಸ್ತೆಯ ಗೊಟ್ಟಿಗೆರೆ ವಾರ್ಡ್, ಪಿಲ್ಲಗಾನಹಳ್ಳಿ ಹಿಂದೂ ರುದ್ರಭೂಮಿಯಲ್ಲಿ ಅದಮ್ಯ ಚೇತನದ 509ನೇ ಹಸಿರು ಭಾನುವಾರ ಕಾರ್ಯಕ್ರಮವನ್ನು ಯಶಸ್ವಿಯಾಗಿ ನೆರೆವೇರಿತು.ಈ ವಿಶೇಷ ಸಂದರ್ಭದಲ್ಲಿ, ಕನ್ನಡ ಸಾಹಿತ್ಯ ಹಾಗೂ ಸಾಂಸ್ಕೃತಿಕ ಕ್ಷೇತ್ರಕ್ಕೆ ಅಮೂಲ್ಯವಾದ ಕೊಡುಗೆ ನೀಡಿರುವ ಪ್ರಖ್ಯಾತ ಲೇಖಕರು ಸರಸ್ವತಿ ಸಮ್ಮಾನ್, ಪದ್ಮಶ್ರೀ ಹಾಗೂ ಪದ್ಮಭೂಷಣ ಪ್ರಶಸ್ತಿ ಪುರಸ್ಕೃತರಾದ ಡಾ. ಎಸ್. ಎಲ್. ಭೈರಪ್ಪ

Green Sunday #509 Read More »

Green Sunday #508

Adamya Green #508 “ಅದಮ್ಯ ಚೇತನದ ‘ಹಸಿರು ಭಾನುವಾರ’ ಕಾರ್ಯಕ್ರಮ: ಅನಂತವನದಲ್ಲಿ 10 ವರ್ಷಗಳ ಹಸಿರು ಸಂಭ್ರಮ” ಅದಮ್ಯ ಚೇತನ ಸಂಸ್ಥೆಯ 508ನೇ ‘ಹಸಿರು ಭಾನುವಾರ’ ಕಾರ್ಯಕ್ರಮವು ಸೆಪ್ಟೆಂಬರ್ 21ರಂದು ಬಸವನಗುಡಿಯ ಬಿ.ಪಿ. ವಾಡಿಯಾ ರಸ್ತೆಯಲ್ಲಿರುವ ಅನಂತವನದಲ್ಲಿ ಯಶಸ್ವಿಯಾಗಿ ನಡೆಯಿತು. ಈ ಕಾರ್ಯಕ್ರಮವು ಅನಂತವನ ಹಸಿರೀಕರಣ ಯೋಜನೆಯ 10ನೇ ವಾರ್ಷಿಕೋತ್ಸವವನ್ನು ವಿಶೇಷವಾಗಿ ಆಚರಿಸಿತು. ನಗರದ ಮಧ್ಯಭಾಗದಲ್ಲಿದ್ದ ಒಂದು ಖಾಲಿ ಪ್ರದೇಶವನ್ನು ಹಚ್ಚಹಸಿರಾಗಿಸುವ ದೂರದೃಷ್ಟಿಯೊಂದಿಗೆ ಶ್ರೀ ಅನಂತಕುಮಾರ್ ಅವರ ಕನಸಿನ ಕೂಸಾಗಿ ಅನಂತವನ ಆರಂಭಗೊಂಡಿತ್ತು. ಕಳೆದ 10 ವರ್ಷಗಳಲ್ಲಿ

Green Sunday #508 Read More »

Green Sunday #507

Adamya Green #507 “ಅದಮ್ಯ ಚೇತನದ 507ನೇ ಹಸಿರು ಭಾನುವಾರ – ಹಸಿರು ಕನಸಿನತ್ತ ಮತ್ತೊಂದು ಹೆಜ್ಜೆ” ಸೆಪ್ಟೆಂಬರ್ 14ರಂದು, ನೆಲಮಂಗಲ RTO ಹತ್ತಿರದ ಶಿವನಪುರದ ನೆಮ್ಮದಿ ಪಾಲಿಯೇಟಿವ್ ಕೇರ್ ಸೆಂಟರ್ ಆವರಣದಲ್ಲಿ, ಅದಮ್ಯ ಚೇತನದ 507ನೇ ‘ಹಸಿರು ಭಾನುವಾರ’ ಕಾರ್ಯಕ್ರಮವು ಯಶಸ್ವಿಯಾಗಿ ನೆರವೇರಿತು. ಹಸಿರು ಸಂಸ್ಕೃತಿ ಬೆಳೆಸುವುದು, ಸ್ವಚ್ಛ ವಾತಾವರಣ ನಿರ್ಮಿಸುವುದು ಮತ್ತು ಪರಿಸರ ಸ್ನೇಹಿ ಜೀವನ ಶೈಲಿಯನ್ನು ಉತ್ತೇಜಿಸುವ ಧ್ಯೇಯದೊಂದಿಗೆ ಆಯೋಜಿಸಲಾದ ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು, ಹಿರಿಯರು, ಸ್ಥಳೀಯರು ಹಾಗೂ ಅನೇಕ ಪರಿಸರ ಪ್ರೇಮಿಗಳು

Green Sunday #507 Read More »

Green Sunday #506

Adamya Green #506 506ನೇ ಹಸಿರು ಭಾನುವಾರ – ನಾಳಿನ ಪರಿಸರಕ್ಕೆ ನಮ್ಮ ಕೊಡುಗೆ ಅದಮ್ಯ ಚೇತನದ “ಹಸಿರು ಭಾನುವಾರ” ಕಾರ್ಯಕ್ರಮವು ಪ್ರತೀ ವಾರ ನಿರಂತರವಾಗಿ ನಡೆಯುತ್ತಿದ್ದು, ಈಗಾಗಲೇ ಅನೇಕರಲ್ಲಿ ಹಸಿರು ಚೇತನವನ್ನು ಮೂಡಿಸಿದೆ. ಈ ಸತತ ಹಸಿರು ಪ್ರಯತ್ನದ ಅಂಗವಾಗಿ, 506ನೇ ಅಧ್ಯಾಯವು ಸೆಪ್ಟೆಂಬರ್ 07, 2025ರಂದು ಬೆಂಗಳೂರಿನ ಕನಕಪುರ ಮುಖ್ಯ ರಸ್ತೆಯ ಬ್ರಿಗೇಡ್ ಮೆಡೋಸ್, ಹಂತ-1 ಆವರಣದಲ್ಲಿ ಯಶಸ್ವಿಯಾಗಿ ನೆರವೇರಿತು. ಮುಂದಿನ ಪೀಳಿಗೆಗೆ ಶುದ್ಧವಾದ ಗಾಳಿ, ಆರೋಗ್ಯಕರ ಜೀವನ ಮತ್ತು ಸಮೃದ್ಧವಾದ ಪ್ರಕೃತಿಯ ರೂಪದಲ್ಲಿ

Green Sunday #506 Read More »

Green Sunday #505

Adamya Green #505 505ನೇ ಹಸಿರು ಭಾನುವಾರ – ಪರಿಸರಕ್ಕಾಗಿ ಒಂದು ಹೆಜ್ಜೆ, ಭವಿಷ್ಯಕ್ಕಾಗಿ ಒಂದು ಸಂಕಲ್ಪ ಆಗಸ್ಟ್ 31ರಂದು ಬೆಂಗಳೂರಿನ ಸೇಂಟ್ ಜಾನ್ಸ್ ರಸ್ತೆಯ ಬಿ.ಎಂ. ಇಂಗ್ಲಿಷ್ ಶಾಲೆಯ ಆವರಣದಲ್ಲಿ ಅದಮ್ಯ ಚೇತನದ 505ನೇ ಹಸಿರು ಭಾನುವಾರ ಕಾರ್ಯಕ್ರಮವು ಯಶಸ್ವಿಯಾಗಿ ನೆರವೇರಿತು.ಪರಿಸರ ಸಂರಕ್ಷಣೆ ಅಗತ್ಯತೆ ಮತ್ತು ಭವಿಷ್ಯದ ಭದ್ರತೆಯ ಕುರಿತು ಜನರಲ್ಲಿ ಜಾಗೃತಿ ಮೂಡಿಸಲು ಹಸಿರು ಭಾನುವಾರದಂತಹ ಚಟುವಟಿಕೆಗಳಿಗೆ ನಾವು ಒಟ್ಟಾಗಿ ಕೈ ಜೋಡಿಸೋಣ. ಪ್ರಕೃತಿಯೊಂದಿಗೆ ಸಹಬಾಳ್ವೆಯನ್ನು ಒತ್ತಿಹೇಳುವ ಈ ಸಾಮಾಜಿಕ ಆಂದೋಲನದಲ್ಲಿ ‘ಹಸಿರು ಯೋಧರು’,

Green Sunday #505 Read More »

Green Sunday #504

Adamya Green #504   ಅದಮ್ಯ ಚೇತನ – 504ನೇ ‘ಹಸಿರು ಭಾನುವಾರ’ದ ಯಶಸ್ವಿ ಸಂಭ್ರಮ ಅದಮ್ಯ ಚೇತನದ ಹಸಿರು ಭಾನುವಾರದ 504ನೇ ಕಾರ್ಯಕ್ರಮವು ಆಗಸ್ಟ್ 24ರಂದು ಕೃಷ್ಣಪ್ಪನಗರ, ಹಾಲನಾಯಕನಹಳ್ಳಿ ಸರ್ಕಾರಿ ಆಸ್ಪತ್ರೆ, ಸರ್ಜಾಪುರ ರಸ್ತೆ, ಬೆಂಗಳೂರು ಇಲ್ಲಿ ಯಶಸ್ವಿಯಾಗಿ ನೆರೆವೇರಿತು. ಪ್ರಕೃತಿ ಸಂರಕ್ಷಣೆ, ಹಸಿರು ಪ್ರಚಾರ ಮತ್ತು ಪರಿಸರ ಸ್ನೇಹಿ ಜೀವನವನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಆಯೋಜಿಸಲಾದ ಈ ಕಾರ್ಯಕ್ರಮದಲ್ಲಿ ಅನೇಕ ಪರಿಸರ ಯೋಧರು, ಸ್ವಯಂಸೇವಕರು, ಸ್ಥಳೀಯರು ಒಗ್ಗೂಡಿ ಪಾಲ್ಗೊಂಡರು. ಸಾಮಾಜಿಕ ಜವಾಬ್ದಾರಿಯೊಂದಿಗೆ ನಡೆಸಿದ ಈ ಹಸಿರು

Green Sunday #504 Read More »

Green Sunday #503

Adamya Green #503 ಅದಮ್ಯ ಚೇತನದ 503ನೇ ಹಸಿರು ಭಾನುವಾರ ಪ್ರಕೃತಿಯನ್ನು ಹಸಿರುಗೊಳಿಸುವ ನಮ್ಮ ಪ್ರಯತ್ನದ ಭಾಗವಾಗಿ, 17-08-2025 ರಂದು ನೆಮ್ಮದಿ ಪಾಲಿಯೇಟಿವ್ ಕೇರ್ ಸೆಂಟರ್, ನೆಲಮಂಗಲ RTO ಹತ್ತಿರ, ಶಿವನಪುರ, ಬೆಂಗಳೂರು ಇಲ್ಲಿ ನಡೆದ 503ನೇ ಹಸಿರು ಭಾನುವಾರ ಕಾರ್ಯಕ್ರಮವು ನಿಮ್ಮೆಲ್ಲರ ಅಪಾರ ಸಹಕಾರ ಮತ್ತು ಉತ್ಸಾಹಭರಿತ ಭಾಗವಹಿಸುವಿಕೆಯಿಂದ ಯಶಸ್ವಿಯಾಗಿ ನೆರವೇರಿತು. ಈ ಸಂದರ್ಭದಲ್ಲಿ ನೆಟ್ಟ ಪ್ರತಿಯೊಂದು ಸಸಿಯೂ, ಮುಂದಿನ ಪೀಳಿಗೆಗೆ ಹಸಿರು-ಸ್ವಚ್ಛ ಭವಿಷ್ಯದ ಸಂಕೇತವಾಗಲಿ ಎಂಬುದು ನಮ್ಮ ಹಾರೈಕೆ. ಪ್ರತಿಯೊಬ್ಬ ಹಸಿರು ಪ್ರೇಮಿಯ ಶ್ರಮ,

Green Sunday #503 Read More »

Green Sunday #502

Adamya Green #502 ಪ್ರತಿ ಭಾನುವಾರ ಹಸಿರಿನ ಹಬ್ಬ – ಹಸಿರು ಯೋಧರೊಂದಿಗೆ ಹಸಿರು ಭಾನುವಾರ ಹಸಿರು ಭವಿಷ್ಯ ನಿರ್ಮಾಣದ ಕನಸನ್ನು ಜೀವಂತಗೊಳಿಸುತ್ತಿರುವ ಅದಮ್ಯ ಚೇತನದ 502ನೇ ಹಸಿರು ಭಾನುವಾರ ಕಾರ್ಯಕ್ರಮವು, ಬೆಂಗಳೂರಿನ ಸರ್ ಎಂ. ವಿಶ್ವೇಶ್ವರಯ್ಯ ಲೇಔಟ್ 1ನೇ ಬ್ಲಾಕ್‌ ನೀರಿನ ಟ್ಯಾಂಕ್ ಸಮೀಪದ ಆವರಣದಲ್ಲಿ ಯಶಸ್ವಿಯಾಗಿ ನೆರವೇರಿತು.ವೃಕ್ಷಾರೋಪಣ, ಸ್ವಚ್ಛತಾ ಕಾರ್ಯ ಮತ್ತು ಪರಿಸರ ಜಾಗೃತಿ ಚಟುವಟಿಕೆಗಳಲ್ಲಿ ಭಾಗವಹಿಸಿದ ಪರಿಸರ ಸ್ನೇಹಿಗಳ ಉತ್ಸಾಹವು ಈ ದಿನವನ್ನು ವಿಶೇಷಗೊಳಿಸಿತು. ಪರಿಸರದ ರಕ್ಷಣೆಗೆ ಬದ್ಧತೆಯನ್ನು ಪ್ರತಿಬಿಂಬಿಸಿದ ಈ ಸ್ಮರಣೀಯ

Green Sunday #502 Read More »