Adamya Chetana

2024

Green Sunday #421

Adamya Green #421 ಅದಮ್ಯ ಚೇತನದ 421 ನೇ ಹಸಿರು ಭಾನುವಾರ ಕಾರ್ಯಕ್ರಮವು ದಿ. 21-01-2024 ರಂದು ಬೆಂಗಳೂರು ವಿ.ವಿ.ಆವರಣದಲ್ಲಿಯ ಎನ್.ಎನ್‌ ಎಸ್ . ಭವನ ಬಳಿ ಗಿಡಗಳನ್ನು ನೆಡಲಾಯಿತು. ಬಿಎಂಎಸ್ ಕಾಲೇಜಿನ ವಿದ್ಯಾರ್ಥಿಗಳು, ಕಲ್ಪವೃಕ್ಷ ಚಾರಿಟೇಬಲ್ ಟ್ರಸ್ಟ್ ಸದಸ್ಯರು, ಹಸಿರು ಯೋಧರು, ಯೂತ್‌ ಫಾರ್‌ ಸೇವಾ, ಯೂತ್‌ ಫಾರ್‌ ಪರಿವರ್ತನ ಸಂಸ್ಥೆಯ ಸದಸ್ಯರು ಭಾಗಿಯಾಗಿದ್ದರು.

Green Sunday #421 Read More »

Green Sunday #420

Adamya Green #420 ಅದಮ್ಯ ಚೇತನದ 420 ನೇ ಹಸಿರು ಭಾನುವಾರ ಕಾರ್ಯಕ್ರಮವು ದಿ. 15-01-2024 ರಂದು ಬೆಂಗಳೂರಿನ ಬಸವನಗುಡಿಯ ಬಿ.ಪಿ.ವಾಡಿಯಾ ರಸ್ತೆಯ ಅನಂತ ವನ ಆವರಣದಲ್ಲಿ ಯಶಸ್ವಿಯಾಗಿ ಜರುಗಿತು. ಈ ಹಿಂದೆ ನೆಟ್ಟಿದ್ದ ಗಿಡಗಳಿಗೆ ನೀರುಣಿಸಲಾಯಿತು. 2 ಗಿಡಗಳನ್ನು ನೆಡಲಾಯಿತು. ಸಂಸ್ಥೆಯ ಅಧ್ಯಕ್ಷೆ ಶ್ರೀಮತಿ ತೇಜಸ್ವಿನಿ ಅನಂತಕುಮಾರ್‌, ಬಿಎಂಎಸ್ ಕಾಲೇಜಿನ ವಿದ್ಯಾರ್ಥಿಗಳು, ಹಸಿರು ಯೋಧರು, ಯೂತ್‌ ಫಾರ್‌ ಸೇವಾ, ಯೂತ್‌ ಫಾರ್‌ ಪರಿವರ್ತನ ಸಂಸ್ಥೆಯ ಸದಸ್ಯರು ಮೊದಲಾದವರು ಭಾಗಿಯಾಗಿದ್ದರು.

Green Sunday #420 Read More »

Green Sunday #419

Adamya Green #419 ಅದಮ್ಯ ಚೇತನದ 419 ನೇ ಹಸಿರು ಭಾನುವಾರ ಕಾರ್ಯಕ್ರಮವು ದಿ. 07-01-2024 ರಂದು ಬೆಂಗಳೂರು ವಿಶ್ವವಿದ್ಯಾಲಯದ ಬಯೋ ಪಾರ್ಕ್‌ ಆವರಣದಲ್ಲಿ ಯಶಸ್ವಿಯಾಗಿ ಜರುಗಿತು. ಈ ಹಿಂದೆ ನೆಟ್ಟಿದ್ದ ಗಿಡಗಳಿಗೆ ನೀರುಣಿಸಲಾಯಿತು.ನಾನಾ ಜಾತಿಯ 10 ಗಿಡಗಳನ್ನು ನೆಡಲಾಯಿತು. ಸಂಸ್ಥೆಯ ಅಧ್ಯಕ್ಷರಾದ ಶ್ರೀಮತಿ ತೇಜಸ್ವಿನಿ ಅನಂತಕುಮಾರ್‌, ವಿವಿಧ ಕಾಲೇಜಿನ ವಿದ್ಯಾರ್ಥಿಗಳು, ಹಸಿರು ಯೋಧರು, ಮೊದಲಾದವರು ಭಾಗಿಯಾಗಿದ್ದರು.The 419th Green Sunday program of Adamya Chethana was successfully held on 07-01-2024 at the

Green Sunday #419 Read More »

Green Sunday #418

Adamya Green #418 ಅದಮ್ಯ ಚೇತನದ 418 ನೇಯ ಹಸಿರು ಭಾನುವಾರ.ಕಳೆದ ಎಂಟು ವರ್ಷ, ಸತತ 418 ವಾರ ಒಂದು ಭಾನುವಾರವೂ ಬಿಡದೇ ನಮ್ಮ ಸ್ವಯಂ ಸೇವಕರು ಗಿಡ ನೆಟ್ಟಿದ್ದಾರೆ, ಅವುಗಳಿಗೆ ನೀರು ಉಣಿಸಿ ಗೊಬ್ಬರ ಹಾಕಿ ಪೋಷಿಸಿದ್ದಾರೆ. ಅನಂತಕುಮಾರ್ ರ ಅಮೃತ ಹಸ್ತದಿಂದ 3 ಜನವರಿ 2016 ರಂದು ಪ್ರಾರಂಭಗೊಂಡ ಈ ಕೆಲಸ ನಮಗಷ್ಟೇ ಅಲ್ಲ ಸಾವಿರಾರು ಜನರಿಗೆ ಪ್ರೇರಣೆ ನೀಡಿದೆ.ಸಸ್ಯ ಶಾಮಲಾಮ್ ಮಾತರಮ್ ವಂದೆ

Green Sunday #418 Read More »

Green Sunday #417

Adamya Green #417 ಅದಮ್ಯ ಚೇತನದ 417 ನೇ ಹಸಿರು ಭಾನುವಾರ ಕಾರ್ಯಕ್ರಮವು 2023ರ ಡಿ. 24 ರಂದು ಬೆಂಗಳೂರಿನ ಎಲೆಕ್ಟ್ರಾನಿಕ್‌ ಸಿಟಿ ವ್ಯಾಪ್ತಿಯ ಮಾರಗೊಂಡನಹಳ್ಳಿ ಕೆರೆಯ ಬದಿ ಯಶಸ್ವಿಯಾಗಿ ಜರುಗಿತು. ವಿವಿಧ ಜಾತಿಯ 50 ಗಿಡಗಳನ್ನು ನೆಡಲಾಯಿತು. ಈ ಹಿಂದೆ ಇದೇ ಆವರಣದಲ್ಲಿ ನೆಟ್ಟಿದ್ದ ಗಿಡಗಳಿಗೆ ನೀರುಣಿಸಲಾಯಿತು. ಬೆಂಗಳೂರಿನ ಬಿಎಂಎಸ್‌ ಕಾಲೇಜು, ಎನ್‌. ಎಸ್.‌ ಎಸ್‌ ನ ವಿದ್ಯಾರ್ಥಿಗಳು, ಗ್ರೀನ್‌ ವಾಲೆಂಟಿಯರ್ಸ್‌ ಹಾಗೂ ಸ್ಥಳೀಯರು ಪಾಲ್ಗೊಂಡಿದ್ದರು.

Green Sunday #417 Read More »