Adamya Chetana

Green Sunday #534

Adamya Green #534

“ಹಸಿರು ಸಂಕಲ್ಪ: 534ನೇ ವಾರದ ಪಯಣ!”

ಶ್ರೀ ಅನಂತಕುಮಾರ್ ಅವರು ಹಾಕಿಕೊಟ್ಟ ಹಸಿರು ಹಾದಿಯಲ್ಲಿ ಸತತ 534ನೇ ವಾರವೂ ನಮ್ಮ ಈ ಹಸಿರು ಭಾನುವಾರ ಅಭಿಯಾನವು ಕಗ್ಗಲಿಪುರದ ಉತ್ತರಿ ಶಂಕರ ಮಠದ ಆವರಣದಲ್ಲಿ ಯಶಸ್ವಿಯಾಗಿ ನೆರೆವೇರಿತು.

ಬಿಸಿಲಿನ ತಾಪ ಏರುತ್ತಿರುವ ಈ ಸಂದರ್ಭದಲ್ಲಿ, ಎ.ಸಿ. ಮತ್ತು ಕೂಲರ್‌ ಗಳ ಮೊರೆ ಹೋಗುವ ಬದಲಿಗೆ ನಮ್ಮ ಬೆಂಗಳೂರಿನ ತಾಪಮಾನ ತಗ್ಗಿಸಲು ಇರುವ ಏಕೈಕ ಶಾಶ್ವತ ದಾರಿ ‘ನೈಸರ್ಗಿಕ ಕೂಲರ್’ಗಳಾದ ಗಿಡ-ಮರಗಳನ್ನು ಬೆಳೆಸುವುದು. ಹೆಚ್ಚುತ್ತಿರುವ ಬಿಸಿಲಿಗೆ ಉತ್ತರ ಕೃತಕ ಸಾಧನಗಳಲ್ಲ, ಬದಲಿಗೆ ನಾವು ಬೆಳೆಸುವ ಹಸಿರು ಹೊದಿಕೆ. ನಾಡನ್ನು ಉಳಿಸಲು, ಪರಿಸರವನ್ನು ಸಂರಕ್ಷಿಸಲು ನಾವೆಲ್ಲರೂ ಕೈಜೋಡಿಸೋಣ.