Adamya Chetana

Sharva Creative

Green Sunday #449

Adamya Green #449 ಅದಮ್ಯ ಚೇತನದ ೪೪೯ನೇ ಹಸಿರು ಭಾನುವಾರ ಕಾರ್ಯಕ್ರಮ ಬೆಂಗಳೂರು ವಿಶ್ವವಿದ್ಯಾಲಯ ಆವರಣದಲ್ಲಿ ಜರುಗಿತು.ನಾವು ಕಳೆದ ವರ್ಷ ಹಾಕಿದ ೩೦೦ ಗಿಡಗಳಿಗೆ ಪಾಣಿ ಮಾಡಿ ನಂತರ ೨೦ ಹೊಸ ಗಿಡಗಳನ್ನು ನೆಡಲಾಯಿತು.ಈ ಪರಿಸರ ಸಂರಕ್ಷಣೆಯ ಕಾರ್ಯಕ್ರಮದಲ್ಲಿ ರಾಮನಗರದ ರಾಷ್ಟ್ರೀಯ ಸೇವಾ ಯೋಜನೆ ವಿದ್ಯಾರ್ಥಿಗಳು, ಸುರಾನಾ ಕಾಲೇಜು, ಬಿ.ಎಮ್.ಎಸ್. ಕಾಲೇಜು ವಿದ್ಯಾರ್ಥಿಗಳು ಪಾಲ್ಗೊಂಡಿದ್ದು, ಇವರೊಡನೆ ಯೂಥ್ ಫಾರ್ ಸೇವಾ ಹಾಗೂ ಇತರ ಪರಿಸರ ಪ್ರೇಮಿಗಳು ಕೈಜೋಡಿಸಿದರು.

Green Sunday #449 Read More »

Green Sunday #448

Adamya Green #448 2024 ಜುಲೈ 28 ರಂದು, ಅದಮ್ಯ ಚೇತನ ಸಂಸ್ಥೆಯ ನಿರಂತರ ಕಾರ್ಯಕ್ರಮವಾದ “ಹಸಿರು ಭಾನುವಾರ”ದ 448 ನೇ ಕಾರ್ಯಕ್ರಮವು ಬೆಂಗಳೂರಿನ ಆವಲಹಳ್ಳಿ-ಅಂಜನಾಪುರ ಕೆರೆ, ನಂದಿ ಗಾರ್ಡನ್ ಅಪಾರ್ಟ್‌ಮೆಂಟ್ ಪಕ್ಕದ ಆವರಣದಲ್ಲಿ ಯಶಸ್ವಿಯಾಗಿ ಜರುಗಿತು. ಅಲ್ಲಿಯ ಸ್ಥಳವನ್ನು ಸ್ವಚ್ಛ ಮಾಡಿ, ವಿವಿಧ ಜಾತಿಯ ಗಿಡಗಳನ್ನು ನೆಟ್ಟು, ನೀರು ಹಾಕಲಾಯಿತು.ಈ ಸಂದರ್ಭದಲ್ಲಿ, ವಿವಿಧ ಕಾಲೇಜು ವಿದ್ಯಾರ್ಥಿಗಳು, ಹಸಿರು ಯೋಧರು, ಅದಮ್ಯ ಚೇತನ ಸಿಬ್ಬಂದಿಗಳು, ಸ್ವಯಂಸೇವಾ ಕಾರ್ಯಕರ್ತರು ಹಾಗೂ ಸ್ಥಳೀಯರು ಪಾಲ್ಗೊಂಡಿದ್ದರು.

Green Sunday #448 Read More »

Green Sunday #447

Adamya Green #447 2024ರ ಜುಲೈ 21 ರಂದು, ಬೆಂಗಳೂರು ವಿಶ್ವವಿದ್ಯಾನಿಲಯದಲ್ಲಿರುವ ಗಾಂಧಿ ಸಂಶೋಧನಾ ಕೇಂದ್ರದ ಬಳಿ ಇರುವ ಬಯೋ-ಪಾರ್ಕ್ ಕ್ಯಾಂಪಸ್ ನ ಆವರಣದಲ್ಲಿ ಅದಮ್ಯ ಚೇತನ ಸಂಸ್ಥೆಯ ನಿರಂತರ ಕಾರ್ಯಕ್ರಮವಾದ “ಹಸಿರು ಭಾನುವಾರ”ದ 447 ನೇ ಕಾರ್ಯಕ್ರವನ್ನು ಹಮ್ಮಿಕೊಳ್ಳಲಾಗಿತ್ತು. ಅಲ್ಲಿಯ ಸ್ಥಳವನ್ನು ಸ್ವಚ್ಛ ಮಾಡಿ, ವಿವಿಧ ಜಾತಿಯ ಗಿಡಗಳನ್ನು ನೆಡಲಾಯಿತು. ಈ ಸಂದರ್ಭದಲ್ಲಿ, ವಿವಿಧ ಕಾಲೇಜು ವಿದ್ಯಾರ್ಥಿಗಳು, ಹಸಿರು ಯೋಧರು, ಅದಮ್ಯ ಚೇತನ ಸಿಬ್ಬಂದಿಗಳು, ಸ್ವಯಂಸೇವಾ ಕಾರ್ಯಕರ್ತರು ಹಾಗೂ ಸ್ಥಳೀಯರು ಪಾಲ್ಗೊಂಡಿದ್ದರು.

Green Sunday #447 Read More »

Green Sunday #446

Adamya Green #446 ಕಲಬುರ್ಗಿಯಲ್ಲಿ “ಸಸ್ಯಾಗ್ರಹ” ಅಭಿಯಾನ – ಗಿಡ ನೆಡುವ ಕಾರ್ಯಕ್ರಮ ಹಸಿರು ಹೆಚ್ಚಿಸಿ, ಪರಿಸರ ಸಂರಕ್ಷಣೆಯ ಕುರಿತು ಜಾಗೃತಿ ಮೂಡಿಸುವ “ಸಸ್ಯಾಗ್ರಹ” ಅಭಿಯಾನದ ಅಡಿಯಲ್ಲಿ ಇಂದು ಕಲಬುರ್ಗಿಯಲ್ಲಿ ಅದಮ್ಯ ಚೇತನದ ಗಿಡ ನೆಡುವ ಕಾರ್ಯಕ್ರಮವು ಪ್ರಾರಂಭವಾಯಿತು. ಈ ಕಾರ್ಯಕ್ರಮದಲ್ಲಿ ಸ್ಥಳೀಯ ನಿವಾಸಿಗಳು, ಪಿಡಿಎ ಎಂಜಿನಿಯರಿಂಗ್ ಕಾಲೇಜಿನ ಪ್ರಾಚಾರ್ಯರು, ಅಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಪರಿಸರದ ರಕ್ಷಣೆಗೆ ನಮ್ಮೆಲ್ಲರ ಪಾಲ್ಗೊಳ್ಳುವಿಕೆಯಿಂದಲೇ ನಿತ್ಯ ನಿಂತು ಬಾಳಲು ಸಾಧ್ಯ.

Green Sunday #446 Read More »

Green Sunday #445

Adamya Green #445 ಕನಕಪುರ ಜಿಲ್ಲೆಯ ಹಾರೋಹಳ್ಳಿ ತಾಲೂಕಿನ ಚಿಕ್ಕಮರಳವಾಡಿ ಗ್ರಾಮ ವ್ಯಾಪ್ತಿಯಲ್ಲಿ ಅದಮ್ಯ ಚೇತನ ಸಂಸ್ಥೆಯು 2024ರ ಜು.07ರಂದು 445ನೇ ʻಹಸಿರು ಭಾನುವಾರʼವನ್ನು ಆಯೋಜಿಸಿತ್ತು. ವಿವಿಧ ಜಾತಿಯ ಹಣ್ಣುಗಳ 12 ಗಿಡಗಳನ್ನು ನೆಡಲಾಯಿತು. ಸಂಸ್ಥೆಯ ಅಧ್ಯಕ್ಷೆ ಶ್ರೀಮತಿ ತೇಜಸ್ವಿನಿ ಅನಂತಕುಮಾರ್‌, ಶ್ರೀಮತಿ ಪ್ರತಿಭಾ ಓಕ್‌, ಶ್ರೀ ಜಿ.ಎಂ. ಇನಾಂದಾರ್‌, ರೋಟರ್ಯಾಕ್ಟ್‌ ಎಸ್‌ ಬಿಎಂಜಿಇಸಿ ಸದಸ್ಯರು, ಯುತ್‌ ಫಾರ್‌ ಸೇವಾ, ಹಸಿರು ಯೋಧರು ಹಾಗೂ ಸ್ಥಳೀಯರು ಪಾಲ್ಗೊಂಡಿದ್ದರು.

Green Sunday #445 Read More »

Green Sunday #444

Adamya Green #444 ಶೃಂಗೇರಿ ಶಾರದಾ ಪೀಠದ 36ನೇ ಪೀಠಾಧೀಶ್ವರರಾದ ಜಗದ್ಗುರು ಶ್ರೀ ಶ್ರೀ ಭಾರತೀ ತೀರ್ಥ ಮಹಾಸನ್ನಿಧಾನಂಗಳವರ ಸಂನ್ಯಾಸ ಸ್ವೀಕಾರದ ಸುವರ್ಣ ಮಹೋತ್ಸವದ ಶುಭ ವರ್ಷ ದಂಗವಾಗಿ 2024ರ ಜೂನ್ 30 ರಂದು ಅದಮ್ಯ ಚೇತನ ಸಂಸ್ಥೆಯು ತನ್ನ ಅಭಿಮಾನದ 444ನೇ ಹಸಿರು ಭಾನುವಾರದ ಕಾರ್ಯಕ್ರಮವನ್ನು ಬೆಂಗಳೂರಿನ ಶಂಕರಪುರದ ಶಂಕರಮಠದಲ್ಲಿ ಆಚರಿಸಿತು. ಸುವರ್ಣ ಭಾರತೀ ವೃಕ್ಷಾರೋಪಣ ಕಾರ್ಯಕ್ರಮ ದ ಸಹಯೋಗದಲ್ಲಿ ಜಗದ್ಗುರು ಶ್ರೀ ಶ್ರೀ ವಿಧುಶೇಖರ ಭಾರತೀ ಸನ್ನಿಧಾನಂಗಳವರ ಮಾರ್ಗದರ್ಶನದಲ್ಲಿ ವಿವಿಧ ಜಾತಿಯ ಹೂವಿನ ಹಾಗೂ

Green Sunday #444 Read More »

Green Sunday #443

Adamya Green #443 ಅದಮ್ಯ ಚೇತನದ 443 ನೇ ಹಸಿರು ಭಾನುವಾರ ಕಾರ್ಯಕ್ರಮವು ದಿ. 23-06-2024 ರಂದು ಬೆಂಗಳೂರಿನ ಗಾಂಧಿ ಸಂಶೋಧನಾ ಕೇಂದ್ರದ ಬಳಿ ಇರುವ ಬೆಂಗಳೂರು ವಿಶ್ವವಿದ್ಯಾಲಯ ಬಯೋ ಪಾರ್ಕ್‌ ಆವರಣದಲ್ಲಿ ಯಶಸ್ವಿಯಾಗಿ ಜರುಗಿತು. ನಾನಾ ಜಾತಿಯ 25 ಗಿಡಗಳನ್ನು ನೆಟ್ಟು , ಅಲ್ಲಿಯ ಸ್ಥಳವನ್ನು ಸ್ವಚ್ಛ ಮಾಡಲಾಯಿತು. ಕೆಪಿಐಟಿ ಯ ಕಂಪನಿಯ ಉದ್ಯೋಗಿಗಳು, ಅಮೃತವರ್ಷಿನಿ ಗಾಯನತಂಡ, ವಿವಿಧ ಕಾಲೇಜಿನ ವಿದ್ಯಾರ್ಥಿಗಳು, ಹಸಿರು ಯೋಧರು, ಮೊದಲಾದವರು ಭಾಗಿಯಾಗಿದ್ದರು.

Green Sunday #443 Read More »

Green Sunday #442

Adamya Green #430 ಅದಮ್ಯ ಚೇತನದ 442ನೇ ಹಸಿರು ಭಾನುವಾರ ಕಾರ್ಯಕ್ರಮವು ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯಲ್ಲಿರುವ ಶಿಕಾರಿಪಾಳ್ಯ ಕೆರೆಯ ಬಳಿ ಯಶಸ್ವಿಯಾಗಿ ನಡೆಯಿತು.ಈ ಸಂದರ್ಭದಲ್ಲಿ ಅದಮ್ಯ ಚೇತನ ಸಂಸ್ಥೆಯ ಅಧ್ಯಕ್ಷರಾದ ಶ್ರೀಮತಿ ತೇಜಸ್ವಿನಿ ಅನಂತ್ ಕುಮಾರ್ ಅವರು, ಬಿಎಂಎಸ್ ಕಾಲೇಜು ವಿದ್ಯಾರ್ಥಿಗಳು, ಅದಮ್ಯ ಚೇತನದ ಅರುಣ್ ಕಮಲಾಕರ್, ಮುಖಂಡರಾದ ಮಣಿರಂಜನ್, ಇಶಾನ್, ಸುತ್ತಪ್ಪ, ರಾಕೇಶ್ ಹಾಗೂ ವಿವಿಧ ಸ್ವಯಂ ಸೇವಾ ಸಂಸ್ಥೆಗಳ ಪದಾಧಿಕಾರಿಗಳು, ಹಸಿರು ಯೋಧರು ಉಪಸ್ಥಿತರಿದ್ದರು.#AdamyaChetana #GreenSunday

Green Sunday #442 Read More »

Green Sunday #441

Adamya Green #439 ಬೆಂಗಳೂರಿನ ಜ್ಞಾನಭಾರತಿ ವ್ಯಾಪ್ತಿಯ ವ್ಯಕ್ತಿಯ ಕೆಂಗೇರಿ ಉಪನಗರದ ಶ್ರೀ ಸಿದ್ಧವಿನಾಯಕ ದೇವಸ್ಥಾನ, ಕೆಬಿಎಚ್‌ ಪ್ಲಾಟಿನಂ ಅಪಾರ್ಟ್‌ಮೆಂಟ್‌ ಹಿಂಭಾಗ 26-05-2024 ರಂದು ಅದಮ್ಯ ಚೇತನ ಸಂಸ್ಥೆಯ ಹಸಿರು ಭಾನುವಾರದ 439ನೇ ಕಾರ್ಯಕ್ರವನ್ನು ಹಮ್ಮಿಕೊಳ್ಳಲಾಗಿತ್ತು. ವಿವಿಧ ಜಾತಿಯ ಒಟ್ಟು 108 ಗಿಡಗಳನ್ನು ನೆಟ್ಟು, ಅಲ್ಲಿಯ ಸ್ಥಳವನ್ನು ಸ್ವಚ್ಛ ಮಾಡಲಾಯಿತು. ಸಂಸ್ಥೆಯ ಅಧ್ಯಕ್ಷೆ ಶ್ರೀಮತಿ ತೇಜಸ್ವಿನಿ ಅನಂತಕುಮಾರ್‌, ಪರ್ಯಾವರಣ ಸಂರಕ್ಷಣ ಪ್ರಾಂತ ಸಂಯೋಜಕ ಶ್ರೀ ಜಯರಾಮ ಬೊಲ್ಲಾಜೆ, ರಾಮಮೂರ್ತಿ ಬೈರಿ ಜೀ, ದೀಪಕ್‌ ಜೀ, ನಾಗೇಶ್‌ ಹೆಗಡೆ,

Green Sunday #441 Read More »

World Environment Day

World Day ವಿಶ್ವ ಪರಿಸರ ದಿನದ ಅಂಗವಾಗಿ ಅದಮ್ಯ ಚೇತನ ಸಂಸ್ಥೆ ಹಾಗೂ ರಾಜ್ಯ ಅರಣ್ಯ ಇಲಾಖೆ ಸಹಯೋಗದಲ್ಲಿ ಅಯೋಧ್ಯೆಯ ಸರಯು ನದಿಯ ತೀರದಲ್ಲಿ 100 ಗಿಡಗಳನ್ನು ನೆಡುವ ಯೋಜನೆಗೆ ಚಾಲನೆ ನೀಡಲಾಯಿತು.ಶ್ರೀ ಅನಂತ್ ಕುಮಾರ್ ಅವರಿಂದ ಪ್ರಾರಂಭಿಸಲಾದ ಸಸ್ಯಾಗ್ರಹ ಕಾರ್ಯಕ್ರಮದ ಮುಂದುವರಿದ ಭಾಗವಾಗಿ ಅದಮ್ಯ ಚೇತನ ಸಂಸ್ಥೆಯ ಅಧ್ಯಕ್ಷರಾದ ಶ್ರೀಮತಿ ತೇಜಸ್ವಿನಿ ಅನಂತ್ ಕುಮಾರ್ ಅವರ ಮಾರ್ಗದರ್ಶನದಲ್ಲಿ ಪರಿಸರ ದಿನದಂದು ಅಯೋಧ್ಯೆಯಲ್ಲಿ ಮರ ನೆಡುವ ಈ ಕಾರ್ಯಕ್ರಮವು ಒಂದು ಪ್ರಮುಖ ಮೈಲಿಗಲ್ಲಾಗಿದೆ.

World Environment Day Read More »