Adamya Green #560
ಅದಮ್ಯ ಚೇತನದ ‘ಹಸಿರು ಭಾನುವಾರ’ (Green Sunday) ಪರಿಸರ ಸಂರಕ್ಷಣೆಯ ತನ್ನ ನಿರಂತರ ಪಯಣದಲ್ಲಿ ಇಂದು 560ನೇ ಮೈಲಿಗಲ್ಲನ್ನು ತಲುಪಿದೆ.
ಶ್ರೀ ಅನಂತಕುಮಾರ್ ಅವರ ಪರಿಸರಪರ ಆಶಯಗಳಿಗೆ ಸ್ಪೂರ್ತಿಯಾಗಿ, ಶ್ರೀಮತಿ ತೇಜಸ್ವಿನಿ ಅನಂತಕುಮಾರ್ ಅವರ ನೇತೃತ್ವದಲ್ಲಿ ಸಾಗುತ್ತಿರುವ ಈ ಹಸಿರು ಪಯಣ, ಸ್ವಚ್ಛ ಮತ್ತು ಹಸಿರು ಪರಿಸರದತ್ತ ನಮ್ಮೆಲ್ಲರ ಸಾಮೂಹಿಕ ಜವಾಬ್ದಾರಿಯನ್ನು ನೆನಪಿಸುತ್ತದೆ.
ಈ ಪಯಣದಲ್ಲಿ ಪ್ರತಿವಾರವೂ ತಮ್ಮ ಅಮೂಲ್ಯ ಸಮಯ, ಶ್ರಮ ಮತ್ತು ಕಾಳಜಿಯನ್ನು ನೀಡುತ್ತಿರುವ ಎಲ್ಲಾ ಸ್ವಯಂಸೇವಕರು ಹಾಗೂ ಪರಿಸರ ಪ್ರೇಮಿಗಳಿಗೆ ಹೃತ್ಪೂರ್ವಕ ಕೃತಜ್ಞತೆಗಳು.


