Adamya Chetana

Adamya Green #567

ಈ ದೀಪಾವಳಿಗೆ ಪಟಾಕಿಗಳ ಹೊಗೆಯಲ್ಲ, ಹಸಿರಿನ ಉಸಿರೇ ನಮ್ಮ ಸಂಭ್ರಮವಾಗಲಿ!
ಬೆಳಕಿನ ಹಬ್ಬ ದೀಪಾವಳಿ ನಮ್ಮ ಬದುಕಿನಲ್ಲಿ ಸಂತೋಷ, ನೆಮ್ಮದಿ ಮತ್ತು ಹೊಸ ಆಶಯಗಳನ್ನು ತುಂಬುವ ಹಬ್ಬ. ಈ ಸಂಭ್ರಮದೊಂದಿಗೆ ಪ್ರಕೃತಿಯ ಸಂರಕ್ಷಣೆಯ ಸಂಕಲ್ಪವನ್ನೂ ಕೈಗೊಳ್ಳೋಣ.
ಬೆಂಗಳೂರಿನ ರಾಜಾಜಿನಗರದ ನೇತಾಜಿ ಸುಭಾಷ್ ಚಂದ್ರ ಬೋಸ್ ಪಾರ್ಕ್‌ ಆವರಣದಲ್ಲಿ #IamBengaluru Volunteer for Parks ಸಹಯೋಗದೊಂದಿಗೆ ಅದಮ್ಯ ಚೇತನದ 567ನೇ ಹಸಿರು ಭಾನುವಾರವು ಯಶಸ್ವಿಯಾಗಿ ನೆರೆವೇರಿತು.
ಈ ಸಂದರ್ಭದಲ್ಲಿ ಪರಿಸರ ಪ್ರೇಮಿಗಳು, ಸ್ಥಳೀಯ ನಿವಾಸಿಗಳು ಹಾಗೂ ಸ್ವಯಂಸೇವಕರು ಒಗ್ಗೂಡಿ ಸಸಿಗಳನ್ನು ನೆಟ್ಟು, ಹಸಿರು ಪರಿಸರ ನಿರ್ಮಾಣಕ್ಕೆ ತಮ್ಮ ಕೊಡುಗೆ ನೀಡಿದರು.
ಹಬ್ಬದ ಸಂಭ್ರಮದಲ್ಲಿ ಪರಿಸರದ ಹಿತವನ್ನೂ ಮರೆಯದಿರೋಣ. ಪಟಾಕಿಗಳಿಂದ ಉಂಟಾಗುವ ವಾಯು ಮತ್ತು ಶಬ್ದ ಮಾಲಿನ್ಯವನ್ನು ತಗ್ಗಿಸಿ, ದೀಪಗಳ ಬೆಳಕಿನಲ್ಲಿ ಪ್ರಕೃತಿಯ ಸೌಂದರ್ಯವನ್ನು ಸಂಭ್ರಮಿಸೋಣ.
ನಾವು ನೆಡುವ ಪ್ರತಿಯೊಂದು ಸಸಿಯೂ ನಾಳಿನ ಶುದ್ಧ ಗಾಳಿ, ಆರೋಗ್ಯಕರ ಬದುಕು ಮತ್ತು ಸುಂದರ ಪರಿಸರಕ್ಕೆ ನೀಡುವ ಅಮೂಲ್ಯ ಕೊಡುಗೆ.
ಈ ದೀಪಾವಳಿಯಲ್ಲಿ ಒಂದು ಹೊಸ ಸಂಕಲ್ಪ ಮಾಡೋಣ – ಕಡಿಮೆ ಮಾಲಿನ್ಯ, ಹೆಚ್ಚು ಹಸಿರು, ಪರಿಸರ ಸ್ನೇಹಿ ಆಚರಣೆ!
ನಮ್ಮ ಹಬ್ಬದ ಬೆಳಕು ಪ್ರಕೃತಿಯ ಉಸಿರನ್ನು ಮಸುಕಾಗಿಸದಿರಲಿ. ಹಸಿರು ದೀಪಾವಳಿಯನ್ನು ಆಚರಿಸೋಣ, ಆರೋಗ್ಯಕರ ಬೆಂಗಳೂರನ್ನು ನಿರ್ಮಿಸೋಣ!