Adamya Green #565
ಮುಂದಿನ ಪೀಳಿಗೆಗೆ ಹಸಿರು ಉಡುಗೊರೆ: ಕೋರಮಂಗಲದಲ್ಲಿ ಯಶಸ್ವಿಯಾಗಿ ನೆರವೇರಿದ 565ನೇ ‘ಹಸಿರು ಭಾನುವಾರ’!
ಕಾಂಕ್ರೀಟ್ ಕಾಡಾಗುತ್ತಿರುವ ನಮ್ಮ ಸಿಲಿಕಾನ್ ಸಿಟಿಗೆ ಜೀವತುಂಬುವ ಮಹತ್ವದ ಹೆಜ್ಜೆ ಇದು. ಕೋರಮಂಗಲ 4ನೇ ಬ್ಲಾಕ್ ನ ಹಾಪ್ ಕಾಮ್ಸ್ ಆವರಣದಲ್ಲಿ #IamBengaluru Volunteer for Parks ಸಹಯೋಗದೊಂದಿಗೆ ಅದಮ್ಯ ಚೇತನದ 565ನೇ ಹಸಿರು ಭಾನುವಾರವು ಅತ್ಯಂತ ಉತ್ಸಾಹದಿಂದ ನೆರೆವೇರಿತು.
ಈ ಅಭಿಯಾನದಲ್ಲಿ ಸ್ಥಳೀಯ ನಿವಾಸಿಗಳು ಹಾಗೂ ನಮ್ಮ ಸಮರ್ಪಿತ ಹಸಿರು ಯೋಧರು ಕೈಜೋಡಿಸಿ ಸಸಿಗಳನ್ನು ನೆಡುವುದರೊಂದಿಗೆ, ಮುಂದಿನ ದಿನಗಳಲ್ಲಿ ಅವುಗಳ ಪೋಷಣೆಯ ಜವಾಬ್ದಾರಿಯನ್ನೂ ಸ್ವಯಂಪ್ರೇರಿತರಾಗಿ ವಹಿಸಿಕೊಂಡರು. ಕೇವಲ ಸಸಿ ನೆಡುವುದು ನಮ್ಮ ಗುರಿಯಲ್ಲ, ಅದು ಹೆಮ್ಮರವಾಗಿ ಬೆಳೆದು ನಿಲ್ಲುವವರೆಗೆ ಕಾಳಜಿ ವಹಿಸುವುದು ನಮ್ಮೆಲ್ಲರ ಸಾಮೂಹಿಕ ಹೊಣೆ.
ಬೆಂಗಳೂರಿನ ಹಸಿರು ಸೊಬಗನ್ನು ಮರಳಿ ತರಲು ಕೈ ಜೋಡಿಸೋಣ. ನಮ್ಮೊಂದಿಗೆ ನೀವೂ ಕೈಜೋಡಿಸಿ, ಹಸಿರು ಕ್ರಾಂತಿಯ ಭಾಗವಾಗಿ!




