Adamya Green #562
ಬೆಂಗಳೂರಿನ ಹಸಿರು ಉಳಿಸುವುದು ನಮ್ಮ ಜವಾಬ್ದಾರಿ… ಬೆಳೆಸುವುದು ನಮ್ಮ ಕರ್ತವ್ಯ!
ಗವಿಪುರಂನ ಅದಮ್ಯ ಚೇತನದ ಆವರಣದಲ್ಲಿ 562ನೇ ಹಸಿರು ಭಾನುವಾರವನ್ನು #IamBengaluru Volunteer for Parks ಸಹಯೋಗದೊಂದಿಗೆ ಆಚರಿಸಲಾಯಿತು. ಈ ಹಸಿರು ಅಭಿಯಾನದಲ್ಲಿ ಸ್ಥಳೀಯ ನಿವಾಸಿಗಳು ಹಾಗೂ ನಮ್ಮ ಹಸಿರು ಯೋಧರು ಒಂದಾಗಿ ಸಸಿಗಳನ್ನು ನೆಟ್ಟು, ಅವುಗಳ ಪೋಷಣೆ ಮತ್ತು ಸಂರಕ್ಷಣೆಯ ಜವಾಬ್ದಾರಿಯನ್ನೂ ಹೊತ್ತುಕೊಂಡರು.
ಒಂದು ಸಸಿ ನೆಡುವುದು ಕೇವಲ ಒಂದು ದಿನದ ಕಾರ್ಯವಲ್ಲ; ಅದನ್ನು ಆರೈಕೆ ಮಾಡಿ, ಬೆಳೆಸಿ, ಮುಂದಿನ ಪೀಳಿಗೆಗೆ ನೆರಳಾಗುವ ಮರವಾಗಿ ರೂಪಿಸುವುದು ನಿಜವಾದ ಪರಿಸರ ಸೇವೆ.
ಬೆಂಗಳೂರು ಮತ್ತೊಮ್ಮೆ ಹಸಿರಿನ ನಗರಿಯಾಗಿ ಅರಳಬೇಕೆಂಬ ನಮ್ಮ ಸಂಕಲ್ಪ ನಿರಂತರ. ನಮ್ಮ ಸುತ್ತಲಿನ ಪರಿಸರವನ್ನು ಹಸಿರಾಗಿಸುವ ಕೆಲಸದಲ್ಲಿ ನೀವೂ ಕೈಜೋಡಿಸಿ!


