Adamya Chetana

Adamya Green #561

25,000 ಜೀವಗಳಿಗೆ ಜೀವ ತುಂಬಿದ ಅದೇ ಪುಣ್ಯ ಭೂಮಿಯಲ್ಲಿ ಇಂದು ಮತ್ತೊಂದು ಸಾರ್ಥಕ ಹೆಜ್ಜೆ!

ನಿನ್ನೆ ಜಟ್ಟಿಗನಹಳ್ಳಿಯ ಬನಶಂಕರಿ 6ನೇ ಹಂತದಲ್ಲಿ ಅದಮ್ಯ ಚೇತನದ ವತಿಯಿಂದ 561ನೇ ಹಸಿರು ಭಾನುವಾರ ಯಶಸ್ವಿಯಾಗಿ ನೆರವೇರಿತು. ನಾವೆಲ್ಲರೂ ಸೇರಿ ಗಿಡಗಳ ಸುತ್ತ ಬೆಳೆದಿದ್ದ ಕಳೆಗಳನ್ನು ತೆಗೆದು, ಪ್ರೀತಿಯಿಂದ ನೀರೆರೆದು ಅವುಗಳಿಗೆ ಹೊಸ ಚೈತನ್ಯ ತುಂಬಲಾಯಿತು.

ಈ ವಿಶೇಷ ಕಾರ್ಯಕ್ರಮದಲ್ಲಿ ಅದಮ್ಯ ಚೇತನದ ಅಧ್ಯಕ್ಷೆ ಶ್ರೀಮತಿ ತೇಜಸ್ವಿನಿ ಅನಂತ್ ಕುಮಾರ್ ಅವರು ಸ್ವತಃ ಉಪಸ್ಥಿತರಿದ್ದು, ಸ್ವಯಂಸೇವಕರು ಹಾಗೂ ಸ್ಥಳೀಯರೊಂದಿಗೆ ಕೈಜೋಡಿಸಿ ಉತ್ಸಾಹ ಇಮ್ಮಡಿಗೊಳಿಸಿದರು. ಗಿಡ ನೆಡುವುದಷ್ಟೇ ಅಲ್ಲ, ಅವುಗಳನ್ನು ಹೆಮ್ಮರವಾಗಿಸುವವರೆಗೆ ನಮ್ಮ ಕಾಳಜಿ ನಿರಂತರ!

562ನೇ ಸಾರ್ಥಕ ಹೆಜ್ಜೆಯತ್ತ ಸಾಗುತ್ತಿರುವ ನಮ್ಮ ಈ ಹಸಿರು ಪಯಣದಲ್ಲಿ ನೀವೂ ಭಾಗಿಯಾಗಿ.