Adamya Chetana

Adamya Green #558

ಭಾನುವಾರ ಎಂದರೆ ವಿಶ್ರಾಂತಿಯ ದಿನ ಮಾತ್ರವಲ್ಲ… ಪ್ರಕೃತಿಗಾಗಿ ಒಂದಿಷ್ಟು ಸಮಯ ಮೀಸಲಿಡುವ ದಿನವೂ ಹೌದು.
ಈ ಮನೋಭಾವದೊಂದಿಗೆ ನಮ್ಮ ಸಂಸ್ಥೆಯ ಮುಖ್ಯಸ್ಥರಾದ ಡಾ. ತೇಜಸ್ವಿನಿ ಅನಂತಕುಮಾರ್ ಅವರ ಮಾರ್ಗದರ್ಶನದಲ್ಲಿ ಹಾಗೂ #IamBengaluru Volunteer for Parks ಸಹಯೋಗದೊಂದಿಗೆ, ಅದಮ್ಯ ಚೇತನದ 558ನೇ Green Sunday ಕಾರ್ಯಕ್ರಮವು ವೆಸ್ಟ್ ಆಫ್ ಕಾರ್ಡ್ ರಸ್ತೆ 2ನೇ ಹಂತದ ಶ್ರೀ ಬಾಲಗಂಗಾಧರ ಸ್ವಾಮಿ ಪಾರ್ಕ್‌ನಲ್ಲಿ ಹಸಿರು ಸಂಭ್ರಮವಾಗಿ ಮೂಡಿಬಂತು.
ಶಾಸಕರಾದ ಶ್ರೀ ಕೆ. ಗೋಪಾಲಯ್ಯ ಅವರು ಸಸಿ ನೆಡುವ ಮೂಲಕ ಅಭಿಯಾನಕ್ಕೆ ಮತ್ತಷ್ಟು ಉತ್ತೇಜನ ನೀಡಿದರು. ಅವರೊಂದಿಗೆ ಸ್ಥಳೀಯರು, ಪರಿಸರ ಪ್ರೇಮಿಗಳು ಹಾಗೂ ಸ್ವಯಂಸೇವಕರು ಉತ್ಸಾಹದಿಂದ ಪಾಲ್ಗೊಂಡು, ಉದ್ಯಾನದ ಹಸಿರನ್ನು ಇನ್ನಷ್ಟು ಸಮೃದ್ಧಗೊಳಿಸುವ ಕಾರ್ಯದಲ್ಲಿ ಕೈಜೋಡಿಸಿದರು.
ಸಸಿಗಳನ್ನು ನೆಡುವುದಷ್ಟೇ ಅಲ್ಲದೆ, ಅವುಗಳನ್ನು ಜವಾಬ್ದಾರಿಯಿಂದ ಪೋಷಿಸಿ ಬೆಳೆಸುವ ನಿಷ್ಠೆಯನ್ನೂ ಪ್ರದರ್ಶಿಸಿದ ಸ್ವಯಂಸೇವಕರ ಹಾಗೂ ಸ್ಥಳೀಯರ ಉತ್ಸಾಹವು, ಪ್ರಕೃತಿ ಸಂರಕ್ಷಣೆಯ ಮೇಲಿನ ನಮ್ಮೆಲ್ಲರ ಬದ್ಧತೆಯನ್ನು ಮತ್ತೊಮ್ಮೆ ಎತ್ತಿಹಿಡಿಯಿತು.
ಹಸಿರಿಗಾಗಿ ಕೈಜೋಡಿಸೋಣ…ಬೆಂಗಳೂರನ್ನು ಇನ್ನಷ್ಟು ಹಸಿರಾಗಿಸಿ, ಸುಂದರಗೊಳಿಸೋಣ!