Adamya Chetana

Plate Bank
ತಟ್ಟೆ ಲೋಟಗಳ ಬ್ಯಾಂಕ್

Reusable plate-bank:

In many functions or events, plastic or paper plates and cups are used. Sometimes, areca nut based plates are also used. These disposable plates, cups and cutlery add to our garbage woes. Not properly recycling them is increasing pollution in our cities. As a sustainable alternative, Adamya Chetana has set up a unique bank with around 10,000 sets of steel plates, spoons, tumblers, cups, etc. These can be borrowed by anyone FREE for their events to serve food, turning their events green. Reduce-Reuse is the mantra at Adamya Chetana!

ಮರುಬಳಕೆ ಮಾಡುವ ತಟ್ಟೆ ಲೋಟಗಳ ಬ್ಯಾಂಕ್

ಇತ್ತೀಚಿನ ದಿನಗಳಲ್ಲಿ ಬಹುತೇಕ ಸಭೆ ಸಮಾರಂಭಗಳಲ್ಲಿ ಊಟ ತಿಂಡಿಗೆ ಪ್ಲಾಸ್ಟಿಕ್ ಲೋಟ – ತಟ್ಟೆಗಳನ್ನು ಬಳಸಲಾಗುತ್ತಿದೆ, ಕೆಲವೆಡೆ ಅಡಿಕೆ ತಟ್ಟೆಗಳನ್ನು ಬಳಸುತ್ತಾರೆ. ಆದರೆ ಇವುಗಳಿಂದಾಗಿ ಕಸದ ಪ್ರಮಾಣ ಹೆಚ್ಚುತ್ತಿದೆ. ಇವುಗಳು ಸರಿಯಾದ ರೀತಿಯಲ್ಲಿ ಮರುಬಳಕೆಯಾಗದೆ ನಗರದಲ್ಲಿ ಪರಿಸರ ಮಾಲಿನ್ಯವಾಗುತ್ತಿದೆ. ಇದಕ್ಕೆ ಪರ್ಯಾಯವಾಗಿ ಅದಮ್ಯ ಚೇತನ ಸಂಸ್ಥೆಯಲ್ಲಿ ಸುಮಾರು ೧೦,೦೦೦ ಸ್ಟೀಲ್ ತಟ್ಟೆಗಳು, ಚಮಚಗಳು, ಲೋಟಗಳನ್ನು ಖರೀದಿಸಿ ಸಂಗ್ರಹಿಸಲಾಗಿದೆ. ನಗರದಲ್ಲಿ ನಡೆಯುವ ಯಾವುದೇ ಸಭೆ ಸಮಾರಂಭಗಳ ಊಟದ ಉಪಯೋಗಕ್ಕಾಗಿ ಈ ಸ್ಟೀಲ್ ತಟ್ಟೆಗಳನ್ನು ನಿಃಶುಲ್ಕವಾಗಿ ನೀಡಲಾಗುವುದು. ಮಿತ ಬಳಕೆ – ಮರುಬಳಕೆ ಅದಮ್ಯ ಚೇತನದ ಮಂತ್ರ.

Plate Bank Address List

Bengaluru

Adamya Chetana

Bengaluru

Swakruta Charitable Trust

Kalburgi

Adamya Chetana Foundation

Kalburgi

Anil Kumar S Tambake

Hubli

Adamya Chetana

Jodhpur

Adamya Chetana

Gadag

Ajith Modak

Raichur

Rajendra Kumar S shivale

Mysore

Srinivasa murthy

Mysore

Anantha Plate Bank

Sirsi

Narayana Hegde

Udupi

Sharada

Kumta

Dr Ganesh hegde

Dehradun

Nature Science Initiative

West Bengal

Anantha Plate Bank

Sagar (Shivamogga)

Anantha Plate Bank

Soraba

Anantha Plate Bank

Dharwad

Swathi Patel Patted

Koppa

Anantha Plate Bank

Koppal

Dr. Anuradha

Bilaspur

Ashwinikumar

Teerthahalli

Grama Abhiruddhi Samithi

Koppa

Anantha Hegde

Kalburgi (Sedam)

Pramod Deshpande

Ayodhya

Adamya chetana

Yelahanka

Anantha Plate Bank

Bangalore

Adamya chetana

Uttarakhand

Ankuram Global Academy

Jodhpur Rajasthan

Ananth Plate Bank, Jodhpur

ಮಾನ್ಯರೇ

ಬೆಂಗಳೂರಿನಲ್ಲಿ ಕಸ ಕಡಿಮೆ ಮಾಡಿ ಪರಿಸರ ಮಾಲಿನ್ಯ ತಡೆಯುವ ಅದಮ್ಯ ಚೇತನದ ಪ್ರಯತ್ನದಲ್ಲಿ ತಾವು ಕೈಜೋಡಿಸಿ ನಿಮ್ಮ ಕಾರ್ಯಕ್ರಮಗಳಿಗೆ ನಮ್ಮ ಪ್ಲೇಟ್ ಬ್ಯಾಂಕ್‌ನಿAದ ಸ್ಟೀಲ್ ತಟ್ಟೆ ಲೋಟಗಳನ್ನು ಪಡೆಯುತ್ತಿರುವುದು ತುಂಬಾ ಸಂತೋಷದ ವಿಷಯ. ಸಮಾರಂಭಗಳಲ್ಲಿ ಬಳಸುವ ಪ್ಲಾಸ್ಟಿಕ್ ತಟ್ಟೆ ಲೋಟಗಳಿಂದ ವನ್ಯಜೀವಿಗಳಿಗೆ ತೊಂದರೆ, ಗಿಡಗಳ ನಾಶ, ಕಸದ ಪ್ರಮಾಣ ಹೆಚ್ಚಳವಾಗುತ್ತಿದೆ. ಆದುದರಿಂದ ನಿಮ್ಮೆಲ್ಲಾ ಕಾರ್ಯಕ್ರಮಗಳಲ್ಲಿ ಸ್ಟೀಲ್, ತಾಮ್ರ, ಮಡಿಕೆ ಮುಂತಾದ ಬೇರೆ ಬೇರೆ ಪರಿಸರಸ್ನೇಹಿ ವಸ್ತುಗಳನ್ನು ಬಳಸಿ ಹಾಗೂ ನಿಮ್ಮ ಬಂಧು ಮಿತ್ರರು, ಸ್ನೇಹಿತರೂ ಈ ಪರಿಸರಸ್ನೇಹಿ ವಸ್ತುಗಳನ್ನು ಉಪಯೋಗಿಸಲು ಪ್ರೇರೇಪಿಸಿ.
ಒಮ್ಮೆ ಮಾತ್ರ ಬಳಸಿ ಬಿಸಾಡುವ ಪ್ಲೇಟ್, ಲೋಟ, ಚಮಚಗಳನ್ನು ಉಪಯೋಗಿಸಿ ಕಸವನ್ನು ಹೆಚ್ಚಿಸುವುದು ಬೇಡ. ಪುನರ್ ಬಳಕೆ ಮಾಡುವಂತಹ ಅದಮ್ಯ ಚೇತನ ಪ್ಲೇಟ್ ಬ್ಯಾಂಕ್‌ನ ಪ್ಲೇಟ್, ಲೋಟ, ಚಮಚಗಳನ್ನು ಬಳಸೋಣ. ಮರೆಯಲಾಗದ ಕಾರ್ಯಕ್ರಮಗಳನ್ನು ಪರಿಸರ ಸ್ನೇಹಿಯಾಗಿಸೋಣ.
ತ್ಯಾಜ್ಯ ಕಡಿಮೆಗೊಳಿಸೋಣ – ಬದುಕನ್ನು ಹಸನಾಗಿಸೋಣ. ಮಿತ ಬಳಕೆ – ಮರುಬಳಕೆ ಅದಮ್ಯ ಚೇತನದ ಮಂತ್ರ.

ಪ್ಲೇಟ್‌ಬ್ಯಾಂಕ್ ವಸ್ತುಗಳನ್ನು ಪಡೆಯಲು ನಿಯಮಗಳು

೧. ಪ್ಲೇಟ್‌ಬ್ಯಾಂಕ್ ವಸ್ತುಗಳನ್ನು ಪಡೆಯಲು ಬರುವವರು ಒಂದು ವಾರ ಮುಂಚಿತವಾಗಿ Request Form ಕೊಡಬೇಕು. (Online OR Offline ಮೂಲಕ ಮಾಡಬಹುದು.)
೨. ಪ್ಲೇಟ್‌ಬ್ಯಾಂಕ್ ವಸ್ತುಗಳನ್ನು ಕೊಡಲು ಮತ್ತು ವಾಪಾಸ್ ಪಡೆಯಲು ಸಮಯ : ಮಧ್ಯಾಹ್ನ ೨ ರಿಂದ ೫.೩೦ ಘಂಟೆಯವರೆಗೆ. ಸೋಮವಾರದಿಂದ ಶನಿವಾರದವರೆಗೆ ಮಾತ್ರ. ಭಾನುವಾರ ಇರುವುದಿಲ್ಲ.
೩. Plate Bank ನಲ್ಲಿರುವ ತಟ್ಟೆ, ಲೋಟ, ಚಮಚ, ಕಠೋರಿ ಇತ್ಯಾದಿಗಳನ್ನು ನಿಶುಲ್ಕವಾಗಿ ನೀಡುತ್ತೇವೆ, ಯಾವುದೇ ಬಾಡಿಗೆ ಇಲ್ಲ. ಪಡೆದುಕೊಂಡಿರುವ ವಸ್ತುಗಳ ಮೌಲ್ಯಕ್ಕೆ 10% Cash , 90% Cheque ಮೂಲಕ ಡೆಪಾಸಿಟ್ ಇಡಬೇಕು.
೪. Plate Bank Issue Form ನಲ್ಲಿ ವಸ್ತುಗಳ ತೂಕವನ್ನು ಕಡ್ಡಾಯವಾಗಿ ಬರೆಯುವುದು. ವಾಪಾಸ್ ಬಂದ ಮೇಲೆ ತೂಕವನ್ನು ಪರಿಶೀಲಿಸುವುದು.
೫. Plate Bank ೧ನೇ ಮಹಡಿಯಲ್ಲಿದೆ. ಸಂಸ್ಥೆಯಲ್ಲಿ ಕೆಲಸದ ಒತ್ತಡ ಜಾಸ್ತಿ ಇರುವುದರಿಂದ ಪ್ಲೇಟ್‌ಬ್ಯಾಂಕ್ ವಸ್ತುಗಳನ್ನು ತೆಗೆದುಕೊಂಡು ಹೋಗಲು/ಮರಳಿ ಬಂದ ಮೇಲೆ ಎಣಿಸಿ ನೋಡಿಕೊಳ್ಳಲು ಸಹಾಯಕ್ಕೆ ಕಾರ್ಯಕರ್ತರನ್ನು ನೀವೇ ಕರೆದುಕೊಂಡು ಬರುವುದು. ಪ್ಲೇಟ್‌ಬ್ಯಾಂಕ್ ವಸ್ತುಗಳನ್ನು ವಾಪಾಸ್ ಕಳುಹಿಸುವಾಗ ಸಹಾಯಕರಿಲ್ಲದೆ ಬರೇ ವಸ್ತುಗಳನ್ನು ಮಾತ್ರ ಬಾಡಿಗೆ ವಾಹನದಲ್ಲಿ ಕಳುಹಿಸುವಂತಿಲ್ಲ.
೬. ತೆಗೆದುಕೊAಡು ಹೋದ ವಸ್ತುಗಳನ್ನು ತೊಳೆದು ಒರೆಸಿ, ಒಣಗಿಸಿ ಹಿಂತಿರುಗಿಸುವುದು.
೭. ವಸ್ತುಗಳು scratch ಆಗದೇ ಇರುವ ಹಾಗೆ ತೊಳೆಯುವುದು. ಪಾತ್ರೆಗಳನ್ನು ತೊಳೆಯಲು ಸ್ಟೀಲ್‌ನಾರು ಬಳಸಬೇಡಿ, ಸ್ಪಂಜ್‌ನಿಂದ ತೊಳೆಯಿರಿ. ಸ್ಪಂಜ್ ನೀಡಲಾಗುವುದು
೮. ತೊಳೆದ ಲೋಟ/ಬೌಲ್‌ಗಳನ್ನು ಒಂದರ ಒಳಗೊಂದು ಹಾಕಬಾರದು. scratch ಆಗುತ್ತದೆ.
೯. ತೆಗೆದುಕೊಂಡು ಹೋದ ವಸ್ತು ಕಳೆದು ಹೋದಲ್ಲಿ ಆ ವಸ್ತುವಿನ ಬೆಲೆಯ ಮೊತ್ತವನ್ನು ಕೊಡುವುದು.
೧೦. ಪಾತ್ರೆಗಳು ಸ್ವಚ್ಛವಾಗಿಲ್ಲದಿದ್ದರೆ ಒಂದು ವಸ್ತು/ಪಾತ್ರೆಗೆ ೧ ರೂ./೫೦ ಪೈಸೆಯಂತೆ ನಿಮ್ಮ ಡೆಪಾಸಿಟ್ ಮೊತ್ತದಲ್ಲಿ ಕಡಿತಗೊಳಿಸಲಾಗುವುದು.
೧೧. ನಿಗದಿತ ದಿನಾಂಕದoದು ಪ್ಲೇಟ್‌ಬ್ಯಾಂಕ್ ವಸ್ತುಗಳನ್ನು ವಾಪಾಸ್ ತರದಿದ್ದಲ್ಲಿ ದಿನಕ್ಕೆ ಸೂಕ್ತವಾದ ಶುಲ್ಕವನ್ನು ವಿಧಿಸಲಾಗುವುದು.
೧೨. ತಾವು ತೆಗೆದುಕೊಂಡು ಹೋದ ಎಲ್ಲಾ ವಸ್ತುಗಳನ್ನು ಹಿಂತಿರುಗಿಸಿದ ಮೇಲೆ ತಾವು ನೀಡಿದ ಚೆಕ್ ಮತ್ತು ನಗದನ್ನು ಹಿಂಪಡೆಯುವುದು.

ANANTH Green Lifestyle Resource Centre

What’s available at ANANTH GLR Centre:
1. A large stock of non-disposable, reusable cutlery available on a returnable basis for events ranging from seminars to weddings.
2. Information, regular workshops, and a support system for home composting.
3. Expertise and resources for chemical-free cleaning solutions, including toilet cleaners, dishwashing liquids, fabric detergents, and floor cleaners.
4. Promotion of sustainable menstrual practices.
5. Availability of saplings of native/local species for tree planting in public spaces.
6. A garage sale section – for both buying and selling pre-loved items.
7. An upcycling centre for repairing, refurbishing, and reusing broken or discarded items.
8. Regular workshops and awareness sessions on the principles of Refuse, Reduce, Reuse, and Recycle.
9. Consultation and support for establishing zero-waste homes, temples, and offices.
10. Consultation and handholding for creating green kitchens and green dining experiences for restaurants and events.
11. A comprehensive approach to green campuses – aiming not just for zero waste, but also for energy generation through fossil-free fuels, zero liquid discharge, increased green cover, and achieving net-negative carbon emissions.

ಅನಂತ ಹಸಿರು ಜೀವನ ಶೈಲಿ ಪರಿಕರ ಕೇಂದ್ರ

ಅನಂತ ಹಸಿರು ಜೀವನ ಶೈಲಿ ಪರಿಕರ ಕೇಂದ್ರದಲ್ಲಿ ಲಭ್ಯವಿರುವ ಸೇವೆಗಳು:
1. ಸಮ್ಮೇಳನಗಳಿಂದ ಹಿಡಿದು ಮದುವೆಗಳಿಗೆವರೆಗೆ ಎಲ್ಲಾ ವಿಧದ ಕಾರ್ಯಕ್ರಮಗಳಿಗೆ ಹಿಂತಿರುಗಿಸಬಹುದಾದ, ಪುನಃಬಳಕೆಯಾಗುವ ತಟ್ಟೆ-ಲೋಟಗಳ ದೊಡ್ಡ ಸಂಗ್ರಹ.
2. ಮನೆಗಳಲ್ಲಿ ಗೊಬ್ಬರ ಮಾಡಲು ಬೇಕಾದ ಮಾಹಿತಿಯನ್ನು ಕೊಡುವದು, ನಿಯಮಿತ ಕಾರ್ಯಾಗಾರಗಳನ್ನು ನಡೆಸುವದು ಹಾಗೂ ಬೆಂಬಲ ವ್ಯವಸ್ಥೆಯನ್ನು ಒದಗಿಸಲಾಗುವದು 
3. ರಾಸಾಯನಿಕವಿಲ್ಲದ ಸೋಪ್/ಮಾರ್ಜಕಗಳ ತಯಾರಿ ಮತ್ತು ಬಳಕೆಗಾಗಿ ಮಾಹಿತಿ ಮತ್ತು ಪರಿಣಿತರಿಂದ ತರಬೇತಿ– ಶೌಚಾಲಯ ಕ್ಲೀನರ್, ಪಾತ್ರೆ ತೊಳೆಯುವ ದ್ರವ್ಯ, ಬಟ್ಟೆ ತೊಳೆಯುವ ಪೌಡರ್, ನೆಲ ತೊಳೆಯುವ ದ್ರವ್ಯ ಇತ್ಯಾದಿ. ಮಾರಾಟದ ವ್ಯವಸ್ಥೆ 
4. ಸ್ತ್ರೀಯರಿಗೆ ಮಾಸಿಕ ಚಕ್ರಾವೃತ್ತಿ ಗೆ ಕಸ ಆಗದೆ- ಮುಜುಗರ ಆಗದ ಪರಿಸರಸ್ನೇಹಿ ಕಪ್ ಬಳಕೆಗೆ ಪ್ರೋತ್ಸಾಹ. ಇದರಿಂದ ಕಸ ಕಡಿಮೆ ಆಗುವದಷ್ಟೇ ಅಲ್ಲದೆ ಹಣದ ಉಳಿತಾಯ ಸಹ ಆಗುವದು 
5. ಸಾರ್ವಜನಿಕ ಸ್ಥಳಗಳಲ್ಲಿ ಮರ ನೆಡುವುದಕ್ಕಾಗಿ ಸ್ಥಳೀಯ ಜಾತಿಯ ಸಸಿಗಳ ಸಂಗ್ರಹ ಲಭ್ಯತೆ.
6. ಗ್ಯಾರೆಜ್ ಸೇಲ್ – ಹಳೆಯ ವಸ್ತುಗಳ  ಖರೀದಿ ಮತ್ತು ಮಾರಾಟ ಮಾಡುವ ವ್ಯವಸ್ಥೆ 
7. ಮರುಸಂಸ್ಕರಣಾ ಕೇಂದ್ರ – ಹಾಳಾದ ಅಥವಾ ಎಸೆಯಲಾದ ವಸ್ತುಗಳನ್ನು ತಂದು ದುರಸ್ತಿ, ಪುನರ್‌ನಿರ್ಮಾಣ ಮತ್ತು ಪುನಃಬಳಕೆ ಮಾಡುವ ವ್ಯವಸ್ಥೆ.
8. ‘ನಿರಾಕರಿಸಿ, ಕಡಿಮೆಮಾಡಿ, ಪುನಃಬಳಸಿ, ಪುನರ್‌ಚಕ್ರಿಸಿ’ ಎಂಬ ತತ್ವಗಳ ಕುರಿತಾಗಿ ನಿಯಮಿತ ಕಾರ್ಯಾಗಾರಗಳು ಮತ್ತು ಜಾಗೃತಿ ಕಾರ್ಯಕ್ರಮಗಳು.
9. ಶೂನ್ಯ ಕಸ ಮನೆಗಳು, ದೇವಾಲಯಗಳು ಮತ್ತು ಕಚೇರಿಗಳನ್ನು ಸ್ಥಾಪಿಸಲು ಸಲಹೆ ಮತ್ತು ಬೆಂಬಲ.
10. ಪರಿಸರ ಸ್ನೇಹಿ, ಶೂನ್ಯ ತ್ಯಾಜ್ಯ ಕಾರ್ಯಕ್ರಮಗಳನ್ನು ರೂಪಿಸಲು ಸಲಹೆ ಮತ್ತು ಸಹಕಾರ 
11. ಹಸಿರು ಕಾಲೇಜು ಕ್ಯಾಂಪಸ್ ಮಾಡಲು ಸಮಗ್ರ ಮಾಹಿತಿ: 
– ಶೂನ್ಯ ತ್ಯಾಜ್ಯವಷ್ಟೇ ಅಲ್ಲದೆ, ಇಂಧನ ಉತ್ಪಾದನೆ ( ಪಳಿಯುಳಿಕೆ ಮುಕ್ತ ಇಂಧನದಿಂದ), ಶೂನ್ಯ ದ್ರವ್ಯ ವ್ಯತಿರಿಕ್ತತೆ, ಹಸಿರು ವೃಕ್ಷಾವರಣ ವೃದ್ಧಿ ಮತ್ತು ಶುದ್ಧವಾಗಿ ಶೂನ್ಯಕ್ಕಿಂತ ಕಡಿಮೆ ಕಾರ್ಬನ್ ಉತ್ಸರ್ಜನೆ ಸಾಧಿಸುವ ಗುರಿ.(net negative carbon emissions) 
ಅದಮ್ಯ ಚೇತನದ ಹಸಿರು ಹೆಜ್ಜೆ – ಅನಂತ ಪ್ಲೇಟ್ ಬ್ಯಾಂಕ್
ಇಂದು ಸಾಯಂಕಾಲ ಸೊರಬದ ಮುರಘಾ ಮಠದಲ್ಲಿ ಪರಿಸರ ಜಾಗೃತಿ ಟ್ರಸ್ಟ್ ಅವರ ಸಹಯೋಗದಲ್ಲಿ ಏರ್ಪಡಿಸಲಾಗಿದ್ದ “ಅನಂತ ಪ್ಲೇಟ್ ಬ್ಯಾಂಕ್” ಉದ್ಘಾಟನಾ ಕಾರ್ಯಕ್ರಮವು ಯಶಸ್ವಿಯಾಗಿ ಜರುಗಿತು.
ಕಾರ್ಯಕ್ರಮದಲ್ಲಿ ಮುರಘಾ ಮಠದ ಶ್ರೀ ಶ್ರೀ ಮು.ನಿ.ಪ್ರ. ಡಾ. ಮಹಾಂತ ಸ್ವಾಮಿಗಳು ದಿವ್ಯ ಸಾನಿಧ್ಯ ವಹಿಸಿದ್ದರು ಮತ್ತು “ಅನಂತ ಪ್ಲೇಟ್ ಬ್ಯಾಂಕ್” ಉದ್ಘಾಟಿಸಿದರು.
ಶ್ರೀಮತಿ ತೇಜಸ್ವಿನಿ ಅನಂತಕುಮಾರ್ ಮಾತನಾಡಿ ಈ ಭಾಗದ ಜೀವ ವೈವಿಧ್ಯ ಉಳಿಸುವಲ್ಲಿ -ಘನತ್ಯಾಜ್ಯ ಕಡಿಮೆ ಮಾಡುವಲ್ಲಿ ಪ್ಲೇಟ್ ಬ್ಯಾಂಕ್ ಸಹಾಯ ಮಾಡುವದು ಎಂದರು.
ಶ್ರೀ ಪ್ರದೀಪ್ ಓಕ್, ಶ್ರೀ ಕೆ. ವೆಂಕಟೇಶ್, ಶ್ರೀ ಎಂ. ಆರ. ಪಾಟೀಲ್, ಶ್ರೀ ಶ್ರೀಪಾದ ಬಿಚ್ಚುಗತ್ತಿ ಮತ್ತು ಸ್ಥಳೀಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಪ್ಲೇಟ್ ಬ್ಯಾಂಕ್ ಸೇವೆ ಉಚಿತವಾಗಿದ್ದು, ಎಲ್ಲರೂ ಇದರ ಪ್ರಯೋಜನ ಪಡೆದುಕೊಳ್ಳಬೇಕಾಗಿ ಮನವಿ.
ಕುಮಟಾದ ಗೋರೆಯ ಕೆನರಾ ಎಕ್ಸಲೆನ್ಸ್ ಪಿ.ಯು. ಕಾಲೇಜು ಸಭಾಭವನದಲ್ಲಿ ಅದಮ್ಯ ಚೇತನ ಮತ್ತು ಶ್ರೀ ಜಿ. ಎನ್. ಹೆಗಡೆ ಟ್ರಸ್ಟ್ ಸಹಯೋಗದೊಂದಿಗೆ ‘ಪ್ಲೇಟ್ ಬ್ಯಾಂಕ್’ ಮತ್ತು ಅನಂತಕುಮಾರ್ ಪ್ರತಿಷ್ಠಾನವು ಪ್ರಕಟಿಸುತ್ತಿರುವ ಅನಂತಪಥ ಮಾಸ‌ಪತ್ರಿಕೆಯ 52ನೇ ಆವೃತ್ತಿಯ ‘ಅನಂತ ಪಥ’ ಪತ್ರಿಕೆಯನ್ನು ಉದ್ಘಾಟಿಸಲಾಯಿತು.
ಈ ಸಂದರ್ಭದಲ್ಲಿ, ಮಾನ್ಯ ಸಂಸದರಾದ ಶ್ರೀ ವಿಶ್ವೇಶ್ವರ ಹೆಗೆಡೆ ಕಾಗೇರಿ, ಕುಮಟಾ – ಹೊನ್ನಾವರ ವಿಧಾನಸಭಾ ಕ್ಷೇತ್ರದ ಮಾನ್ಯ ಶಾಸಕರಾದ ಶ್ರೀ ದಿನಕರ ಶೆಟ್ಟಿ, ಲಯನ್ಸ್ ಕ್ಲಬ್ ನ ಅಧ್ಯಕ್ಷರಾದ ಶ್ರೀಮತಿ ಮಂಗಲಾ ನಾಯಕ್ ಹಾಗೂ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.
ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆ ಮಾಡುವ ಹಾಗೂ ಪರಿಸರ ಸ್ನೇಹಿ ಪರ್ಯಾಯಗಳ ಬಳಕೆಯನ್ನು ಉತ್ತೇಜಿಸುವ ‘ಪ್ಲೇಟ್ ಬ್ಯಾಂಕ್’ ಯೋಜನೆಯು, ಸ್ವಚ್ಛ ಮತ್ತು ಸುರಕ್ಷಿತ ಪರಿಸರ ನಿರ್ಮಾಣದತ್ತ ಹೆಜ್ಜೆ ಇಡಲು ಜನಸಾಮಾನ್ಯರಲ್ಲಿ ಜಾಗೃತಿ ಮೂಡಿಸುವ ವಿನೂತನ ಕಾರ್ಯವಾಗಿದೆ. “ಅನಂತಪಥ” ಪತ್ರಿಕೆಯ ಹೊಸ ಸಂಚಿಕೆ, ಶ್ರೀ ಅನಂತಕುಮಾರ್ ಅವರ ಆದರ್ಶಗಳು ಮತ್ತು ಸಮಗ್ರ ಸಮುದಾಯದ ಕಲ್ಯಾಣದತ್ತ ಒಲವು ಹೊಂದಿರುವ ಅವರ ದೃಷ್ಟಿಕೋನವನ್ನು ಮುಂದುವರೆಸುವ ಪ್ರಯತ್ನವಾಗಿದೆ.
ದಿನಾಂಕ 22-10-2024 ರಂದು ಶ್ರೀ ಶಾರದಾಂಬಾ ಶಿಕ್ಷಣ ಹಾಗೂ ಗ್ರಾಮೀಣಾಭಿವೃದ್ಧಿ ಸಂಸ್ಥೆ (ರಿ), ಭೈರುಂಬೆ ಶಿರಶಿ ಅವರ ಸಹಯೋಗದೊಂದಿಗೆ ಅದಮ್ಯ ಚೇತನದ ಹಸಿರು ಯೋಜನೆಗಳಲ್ಲೊಂದಾದ “ಅನಂತ ಪ್ಲೆಟ್ ಬ್ಯಾಂಕ್” ಉದ್ಘಾಟನಾ ಕಾರ್ಯಕ್ರಮ ಯಶಸ್ವಿಯಾಗಿ ಜರುಗಿತು.
ಕಾರ್ಯಕ್ರಮದಲ್ಲಿ ಹಿರಿಯ ಮುಖಂಡರು ಹಾಗೂ ಸಂಸದರಾದ ಶ್ರೀ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು, ಅದಮ್ಯ ಚೇತನದ ಅಧ್ಯಕ್ಷರಾದ ಶ್ರೀಮತಿ ತೇಜಸ್ವಿನಿ ಅನಂತಕುಮಾರ್ ಅವರು, ಸಂಸ್ಥೆಯ ಅಧ್ಯಕ್ಷರಾದ ಶ್ರೀ ವಿಘ್ನೇಶ್ವರ ಹೆಗಡೆ ಅವರು, ಶ್ರೀ ಪ್ರದೀಪ್ ಓಕ್ ಅವರು ಹಾಗೂ ಇತರರು ಉಪಸ್ಥಿತರಿದ್ದರು.
ಪ್ಲಾಸ್ಟಿಕ್ ಬಳಕೆ ತಡೆಯುವ ಮತ್ತು ಕಸದ ಉತ್ಪಾದನೆ ಕಡಿಮೆ ಮಾಡುವ ಮಹತ್ ಗುರಿಯೊಂದಿಗೆ “ಅನಂತ ಪ್ಲೆಟ್ ಬ್ಯಾಂಕ್” ಕೆಲಸ ಮಾಡಲಿದೆ. ಇದೇ ರೀತಿ ಬೆಂಗಳೂರು, ಕಲಬುರಗಿ, ಜೋಧಪುರ್, ಬೆಂಗಳೂರು ಹಾಗೂ ಇನ್ನೂ ಹಲವು ಕಡೆಗಳಲ್ಲಿ ಪ್ಲೆಟ್ ಬ್ಯಾಂಕ್ ಕಾರ್ಯಮಾಡಲಿವೆ. ಶಿರಶಿಯ ಜನತೆ ಈ ಪರಿಸರ ಸ್ನೇಹಿ ಉಪಕ್ರಮದ ಲಾಭ ಪಡೆಯಲಿದ್ದಾರೆ.
ಕಲಬುರ್ಗಿಯಲ್ಲಿ ಅದಮ್ಯ ಚೇತನದ “ಅನಂತ ಪ್ಲೇಟ್ ಬ್ಯಾಂಕ್” ಉದ್ಘಾಟನೆ 🌿
ಇಂದು ಕಲಬುರ್ಗಿಯಲ್ಲಿ ಅದಮ್ಯ ಚೇತನ ಮತ್ತು ಸ್ವಾಭಿಮಾನ್ ಸ್ವದೇಶಿ ಮಾರ್ಟ್ ಸಂಯುಕ್ತ ಆಶ್ರಯದಲ್ಲಿ ಪರಿಸರ ಸಂರಕ್ಷಣೆಯ ಧ್ಯೇಯದ “ಅನಂತ ಪ್ಲೇಟ್ ಬ್ಯಾಂಕ್” ಉದ್ಘಾಟಿಸಲಾಯಿತು. ಕಲಬುರ್ಗಿಯ ಮೇಯರ್ ವಿಶಾಲ್ ದಾರಗಿ ಮತ್ತು ಡಾ. ದೇಶಪಾಂಡೆ ಅವರು ಈ ಉದ್ಘಾಟನೆಯಲ್ಲಿ ಪಾಲ್ಗೊಂಡರು.
ಈ ಪ್ಲೇಟ್ ಬ್ಯಾಂಕ್‌ನಿಂದ ಸಮಾರಂಭಗಳಲ್ಲಿ ಊಟ ನೀಡಲು ತಟ್ಟೆ, ಬಟ್ಟಲು, ಲೋಟ, ಚಮಚಗಳನ್ನು ಪಡೆದುಕೊಳ್ಳಬಹುದಾಗಿದೆ. ಇದರಿಂದ ಏಕಬಳಕೆಯ ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡುವುದು ಮುಖ್ಯ ಗುರಿಯಾಗಿದೆ. 🌍
ಕಲಬುರ್ಗಿಯಲ್ಲಿ ಅದಮ್ಯ ಚೇತನದ “ಅನಂತ ಪ್ಲೇಟ್ ಬ್ಯಾಂಕ್” ಉದ್ಘಾಟನೆ 🌿
ಇಂದು ಕಲಬುರ್ಗಿಯಲ್ಲಿ ಅದಮ್ಯ ಚೇತನ ಮತ್ತು ಸ್ವಾಭಿಮಾನ್ ಸ್ವದೇಶಿ ಮಾರ್ಟ್ ಸಂಯುಕ್ತ ಆಶ್ರಯದಲ್ಲಿ ಪರಿಸರ ಸಂರಕ್ಷಣೆಯ ಧ್ಯೇಯದ “ಅನಂತ ಪ್ಲೇಟ್ ಬ್ಯಾಂಕ್” ಉದ್ಘಾಟಿಸಲಾಯಿತು. ಕಲಬುರ್ಗಿಯ ಮೇಯರ್ ವಿಶಾಲ್ ದಾರಗಿ ಮತ್ತು ಡಾ. ದೇಶಪಾಂಡೆ ಅವರು ಈ ಉದ್ಘಾಟನೆಯಲ್ಲಿ ಪಾಲ್ಗೊಂಡರು.
ಈ ಪ್ಲೇಟ್ ಬ್ಯಾಂಕ್‌ನಿಂದ ಸಮಾರಂಭಗಳಲ್ಲಿ ಊಟ ನೀಡಲು ತಟ್ಟೆ, ಬಟ್ಟಲು, ಲೋಟ, ಚಮಚಗಳನ್ನು ಪಡೆದುಕೊಳ್ಳಬಹುದಾಗಿದೆ. ಇದರಿಂದ ಏಕಬಳಕೆಯ ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡುವುದು ಮುಖ್ಯ ಗುರಿಯಾಗಿದೆ. 🌍