Adamya Chetana

Adamya Green #545

 

ವಿಶ್ವ ಪರಿಸರ ದಿನದ ಸಂಭ್ರಮ: ಹಸಿರು ಕ್ರಾಂತಿಯ 545ನೇ ಹೆಜ್ಜೆ!

ವಿಶ್ವ ಪರಿಸರ ದಿನದ ಸಂಭ್ರಮದೊಂದಿಗೆ, ಜೂನ್ 07, 2026 ರಂದು ಜಟ್ಟಿಗರಹಳ್ಳಿಯ ಮುನೇಶ್ವರ ದೇವಸ್ಥಾನದ ಆವರಣದಲ್ಲಿ ನಡೆದಅದಮ್ಯ ಚೇತನದ 545ನೇ ಹಸಿರು ಭಾನುವಾರ ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗಿ ನೆರವೇರಿತು.

ಸಂಸ್ಥೆಯ ಅಧ್ಯಕ್ಷೆ ಶ್ರೀಮತಿ ತೇಜಸ್ವಿನಿ ಅನಂತಕುಮಾರ್‌ ಅವರ ನೇತೃತ್ವದಲ್ಲಿ, “ಹಸಿರಾಗಿ ಬದುಕೋಣ, ಭೂಮಿಯನ್ನು ಪ್ರೀತಿಸೋಣ” ಎಂಬ ಸಂಕಲ್ಪದೊಂದಿಗೆ ಕಾರ್ಯಕ್ರಮ ನಡೆಯಿತು. ಪುಟ್ಟ ಮಕ್ಕಳಿಂದ ಹಿಡಿದು ಹಿರಿಯರವರೆಗೆ, ರಾಷ್ಟ್ರೋತ್ಥಾನ ವಿದ್ಯಾ ಕೇಂದ್ರದ ಸ್ವಯಂಸೇವಕರು ಹಾಗೂ ಸ್ಥಳೀಯ ನಾಗರಿಕರು ಒಗ್ಗಟ್ಟಿನಿಂದ ಗಿಡಗಳನ್ನು ನೆಟ್ಟು ಪರಿಸರ ಸಂರಕ್ಷಿಸುವ ಸಂಕಲ್ಪವನ್ನು ಮತ್ತಷ್ಟು ಬಲಪಡಿಸಿದರು.

“ಕೇವಲ ಒಂದು ದಿನವಲ್ಲ, ವರ್ಷದ 365 ದಿನಗಳೂ ಪರಿಸರ ದಿನವಾಗಬೇಕು” ಎಂಬ ನಮ್ಮ ಸಂದೇಶವನ್ನು ಮತ್ತೊಮ್ಮೆ ಸಾರಿದ ಈ ಹಸಿರು ಅಭಿಯಾನದಲ್ಲಿ ಭಾಗವಹಿಸಿದ ಎಲ್ಲಾ ಪರಿಸರ ಪ್ರೇಮಿಗಳಿಗೆ ಹೃತ್ಪೂರ್ವಕ ಧನ್ಯವಾದಗಳು.

ಗಿಡ ನೆಡೋಣ, ಗಿಡ ಬೆಳೆಸೋಣ, ಭೂಮಿಯನ್ನು ಉಳಿಸೋಣ, ನಮ್ಮ ಮುಂದಿನ ಪೀಳಿಗೆಗಾಗಿ ಹಸಿರು ಪರಿಸರವನ್ನು ನಿರ್ಮಿಸೋಣ.

#ವಿಶ್ವಪರಿಸರದಿನ #ಹಸಿರುಭಾನುವಾರ #ಅದಮ್ಯಚೇತನ #AdamyaChetana #GreenSunday #545thGreenSunday #WorldEnvironmentDay #TreePlantation #SaveEnvironment #SaveEarth #GoGreen #Bengaluru