Adamya Chetana

Adamya Green #544

ಹಸಿರು ಭಾನುವಾರದ 544ನೇ ನಿರಂತರ ಹೆಜ್ಜೆ! 🌿
ಅದಮ್ಯ ಚೇತನ ಸಂಸ್ಥೆಯ ಅಧ್ಯಕ್ಷರಾದ ಶ್ರೀಮತಿ ತೇಜಸ್ವಿನಿ ಅನಂತಕುಮಾರ್ ಅವರ ನೇತೃತ್ವದಲ್ಲಿ, ‘ಸಸ್ಯಾಗ್ರಹ’ ಅಭಿಯಾನದ ಅಂಗವಾಗಿ ಇಂದು ಬೆಂಗಳೂರಿನ ನಿಮ್ಹಾನ್ಸ್ (NIMHANS) ಆವರಣದಲ್ಲಿ ಪರಿಸರ ಪ್ರೇಮಿಗಳೊಂದಿಗೆ ಸಸಿಗಳನ್ನು ನೆಡಲಾಯಿತು. ಈ ವಾರದ ಹಸಿರು ಭಾನುವಾರದ ವಿಶೇಷ ಕಾರ್ಯಕ್ರಮಕ್ಕೆ IEEE ಬೆಂಗಳೂರು ವಿಭಾಗವು ಕೈಜೋಡಿಸಿತ್ತು.
ನಮ್ಮೊಂದಿಗೆ ಭಾಗವಹಿಸಿ ಸಸಿ ನೆಟ್ಟ ನಿಮ್ಹಾನ್ಸ್ ನಿರ್ದೇಶಕರಾದ ಡಾ. ಪ್ರಭಾ ಚಂದ್ರ, ಡೀನ್ ಡಾ. ನಳಿನಿ, ಮತ್ತು IEEE ಮಹಿಳಾ ವಿಭಾಗದ ಮುಖ್ಯಸ್ಥರಾದ ಡಾ. ಅಶ್ವಿನಿ ಅವರಿಗೆ ನಮ್ಮ ಹೃತ್ಪೂರ್ವಕ ಧನ್ಯವಾದಗಳು. ಕ್ಯಾಂಪಸ್‌ನ ಹಸಿರು ಮತ್ತು ಸುಸ್ಥಿರತೆಯನ್ನು ಹೆಚ್ಚಿಸಲು ನಮ್ಮ ಸ್ಥಳೀಯ ತಳಿಗಳ 50 ಸಸಿಗಳನ್ನು ನೆಡಲಾಯಿತು.
ಬನ್ನಿ, ಹಸಿರು ಪ್ರಕೃತಿಯನ್ನು ಬೆಳೆಸೋಣ, ಭವಿಷ್ಯವನ್ನು ಉಳಿಸೋಣ!🌱