Adamya Green #542
“ಹಸಿರು ಸೇವೆಯ 542ನೇ ಹೆಜ್ಜೆ – ಪ್ರಕೃತಿಗೆ ನಮ್ಮ ಪ್ರೀತಿಯ ನಮನ”
ಶ್ರೀ ಅನಂತ ಕುಮಾರ್ ಅವರ “ಹಸಿರು-ಉಸಿರು” ಕನಸನ್ನು ಸಾಕಾರಗೊಳಿಸುವ ದಾರಿಯಲ್ಲಿ ಅದಮ್ಯ ಚೇತನದ 542ನೇ ಹಸಿರು ಭಾನುವಾರ ಕಾರ್ಯಕ್ರಮವು ಬೆಂಗಳೂರಿನ ಉತ್ತರಿ ಶಂಕರ ಮಠದ ಆವರಣದಲ್ಲಿ ಯಶಸ್ವಿಯಾಗಿ ನೆರವೇರಿತು.
ಅದಮ್ಯ ಚೇತನ ಎಂದಿಗೂ ಕೇವಲ ಗಿಡ ನೆಡುವುದಕ್ಕೆ ಸೀಮಿತವಾಗದೆ, ನೆಟ್ಟ ಪ್ರತಿಯೊಂದು ಸಸಿಯೂ ಹೆಮ್ಮರವಾಗುವವರೆಗೆ ತಾಯಿಯಂತೆ ಜವಾಬ್ದಾರಿಯಿಂದ ಪೋಷಿಸುತ್ತಾ ಬಂದಿದೆ. ಸಂಪೂರ್ಣವಾಗಿ ಪಳೆಯುಳಿಕೆ ಮುಕ್ತ ಇಂಧನ ಬಳಸಿ, ಶೂನ್ಯ ತ್ಯಾಜ್ಯ ತತ್ವದಡಿ ನಡೆಯುವ ನಮ್ಮ ಅನ್ನಪೂರ್ಣ ಅಡುಗೆಮನೆಯಲ್ಲಿ ಹೊರಬರುವ ಜೈವಿಕ ತ್ಯಾಜ್ಯದಿಂದ ತಯಾರಾಗುವ ಅತ್ಯುತ್ತಮ ಗೊಬ್ಬರವನ್ನು ನಾವು ನೆಟ್ಟ ಗಿಡಗಳಿಗೆ ಹಾಕಿ ಪೋಷಿಸುತ್ತಿದ್ದೇವೆ ಎನ್ನುವುದು ಹೆಮ್ಮೆಯ ವಿಷಯ.
ಕಳೆದ 10+ ವರ್ಷಗಳಿಂದ ನಿರಂತರವಾಗಿ ಒಂದು ಆದಿವಾರವನ್ನೂ ಬಿಡದೆ ಸತತವಾಗಿ ಮುನ್ನಡೆಸಿಕೊಂಡು ಬಂದಿರುವ ಈ ಸುದೀರ್ಘ ಹಾಗೂ ಅರ್ಥಪೂರ್ಣ ಹಸಿರು ಸೇವೆಯಲ್ಲಿ ಹೆಗಲಿಗೆ ಹೆಗಲು ಕೊಟ್ಟು ಕೈಜೋಡಿಸಿದ ಎಲ್ಲಾ ಆತ್ಮೀಯ ಸ್ವಯಂಸೇವಕರಿಗೂ ಹಾಗೂ ಪರಿಸರ ಪ್ರೇಮಿಗಳಿಗೂ ಹೃತ್ಪೂರ್ವಕ ಧನ್ಯವಾದಗಳು.
#ಹಸಿರುಭಾನುವಾರ #ಶೂನ್ಯತ್ಯಾಜ್ಯ #GreenSunday #AdamyaChetana #AnanthKumar #SaveEnvironment #GreenKarnataka #Bengaluru




