Adamya Green #536
“536ನೇ ಹಸಿರು ಭಾನುವಾರ – ಸಮೃದ್ಧ ಹಸಿರಿಗಾಗಿ ನಿರಂತರ ಪಯಣ!”
ಬೆಂಗಳೂರಿನ ಕನಕಪುರ ರಸ್ತೆಯ ಉತ್ತರಿ ಶಂಕರ ಮಠದ ಆವರಣದಲ್ಲಿ ಅದಮ್ಯ ಚೇತನದ 536ನೇ ವಾರದ ಹಸಿರು ಭಾನುವಾರವು ಯಶಸ್ವಿಯಾಗಿ ನೆರವೇರಿತು.
ನಮ್ಮ ಶ್ರಮ ಸಣ್ಣದಿರಬಹುದು, ಆದರೆ ಅದರ ಪರಿಣಾಮ ಮುಂದಿನ ತಲೆಮಾರುಗಳಿಗೆ ದೊಡ್ಡದಾಗಿರುತ್ತದೆ. ಪ್ರಕೃತಿಯನ್ನು ಉಳಿಸಿ, ಬೆಳೆಸುವ ನಿಟ್ಟಿನಲ್ಲಿ ನಾವಿಟ್ಟ ಈ ಪುಟ್ಟ ಹೆಜ್ಜೆ, ಮುಂದಿನ ಪೀಳಿಗೆಗೆ ಸುಸ್ಥಿರ ಮತ್ತು ಹಸಿರು ಪರಿಸರವನ್ನು ನಿರ್ಮಿಸುವಲ್ಲಿ ದೊಡ್ಡ ಬದಲಾವಣೆ ತರಲಿದೆ ಎಂಬ ನಂಬಿಕೆ ನಮ್ಮದು.
ಹಿರಿಯರ ಅನುಭವ ಮತ್ತು ಮಕ್ಕಳ ಉತ್ಸಾಹ ಒಟ್ಟಾಗಿ ‘ಹಸಿರು ಸಂಸ್ಕೃತಿ’ಯ ಸಂದೇಶವನ್ನು ಮತ್ತಷ್ಟು ಗಟ್ಟಿಗೊಳಿಸಿತು
ಈ ಹಸಿರು ಯಾತ್ರೆಯಲ್ಲಿ ಹಸಿರು ಯೋಧರು, ಅದಮ್ಯ ಚೇತನ ಸಿಬ್ಬಂದಿಗಳು, ಸ್ವಯಂಸೇವಾ ಕಾರ್ಯಕರ್ತರು, ಪರಿಸರ ಸ್ನೇಹಿಗಳು ಹಾಗೂ ಸ್ಥಳೀಯರು ಪಾಲ್ಗೊಂಡಿದ್ದರು.



