Adamya Chetana

Adamya Green #535

 

“ಪರಿಸರ ರಕ್ಷಣೆಯತ್ತ ಮತ್ತೊಂದು ಹೆಜ್ಜೆ: 535ನೇ ಹಸಿರು ಭಾನುವಾರ!”

ಅದಮ್ಯ ಚೇತನದ 535ನೇ ಹಸಿರು ಭಾನುವಾರ ಕಾರ್ಯಕ್ರಮವು ಬೆಂಗಳೂರಿನ ಕೆಂಪೇಗೌಡ ನಗರದ ಗವಿಪುರಂನಲ್ಲಿರುವ ಅದಮ್ಯ ಚೇತನ ಆವರಣದಲ್ಲಿ ಅತ್ಯಂತ ಯಶಸ್ವಿಯಾಗಿ ನೆರವೇರಿತು.

ಪರಿಸರ ಸಂರಕ್ಷಣೆ ಕುರಿತು ವಿದ್ಯಾರ್ಥಿಗಳು ಹಾಗೂ ಸಮುದಾಯದವರಲ್ಲಿ ಅರಿವು ಮೂಡಿಸುವುದು ಈ ಕಾರ್ಯಕ್ರಮದ ಪ್ರಮುಖ ಉದ್ದೇಶವಾಗಿದೆ. ಈ ಹಿನ್ನಲೆಯಲ್ಲಿ ಗಿಡ ನೆಡುವಿಕೆ ಮತ್ತು ಸ್ವಚ್ಛತಾ ಕಾರ್ಯಗಳನ್ನು ಉತ್ಸಾಹದಿಂದ ನಡೆಸಲಾಯಿತು.

ಪ್ರತಿ ಭಾನುವಾರ ನಿರಂತರವಾಗಿ ನಡೆಯುತ್ತಿರುವ ಈ ಹಸಿರು ಅಭಿಯಾನವು ಜನರಲ್ಲಿ ಸುಸ್ಥಿರ ಜೀವನ ಶೈಲಿಯ ಬಗ್ಗೆ ಜಾಗೃತಿ ಮೂಡಿಸುತ್ತಿದ್ದು, ಪರಿಸರದ ಮೇಲಿನ ಹೊಣೆಗಾರಿಕೆಯನ್ನು ಹೆಚ್ಚಿಸುತ್ತಿದೆ.

ಈ ಸಂದರ್ಭದಲ್ಲಿ, ಹಸಿರು ಯೋಧರು, ಅದಮ್ಯ ಚೇತನದ ಸಿಬ್ಬಂದಿ, ಸ್ವಯಂಸೇವಕರು, ಪರಿಸರ ಪ್ರೇಮಿಗಳು ಹಾಗೂ ಸ್ಥಳೀಯರು ಸಕ್ರಿಯವಾಗಿ ಭಾಗವಹಿಸಿ ಕಾರ್ಯಕ್ರಮಕ್ಕೆ ಬೆಂಬಲ ನೀಡಿದರು.