Adamya Green #531
ಅನಂತವನದಲ್ಲಿ ಹಸಿರು ಹಬ್ಬ: 531ನೇ ಹಸಿರು ಭಾನುವಾರದ ಸಂಭ್ರಮ!
ಹತ್ತು ವರ್ಷಗಳ ಹಿಂದೆ ಶ್ರೀ ಅನಂತಕುಮಾರ್ ಅವರು ಕಂಡ ಹಸಿರು ಕನಸು ಇಂದು ಬಸವನಗುಡಿಯ ಅನಂತವನದಲ್ಲಿ ಸಾಕಾರಗೊಂಡಿದೆ. ಅದಮ್ಯ ಚೇತನದ ‘ಹಸಿರು ಭಾನುವಾರ’ ಅಭಿಯಾನವು ಮಾರ್ಚ್ 01ರಂದು ತನ್ನ 531ನೇ ಮೈಲಿಗಲ್ಲನ್ನು ಅನಂತವನದಲ್ಲಿ ಯಶಸ್ವಿಯಾಗಿ ಆಚರಿಸಿತು.
ಒಂದು ಕಾಲದ ಖಾಲಿ ಪ್ರದೇಶ ಇಂದು ಪಕ್ಷಿ-ಸಂಕುಲದ ತಾಣವಾಗಿ ಮಾರ್ಪಟ್ಟಿದ್ದು, ಇದು ಕೇವಲ ಒಂದು ಕಾರ್ಯಕ್ರಮವಲ್ಲ, ಹಸಿರನ್ನು ಉಸಿರಾಗಿಸಿಕೊಳ್ಳುವ ಸತತ ಪ್ರಯತ್ನ.
ಗಿಡ ನೆಡುವುದು ಎಷ್ಟು ಮುಖ್ಯವೋ, ಅವುಗಳನ್ನು ಮಕ್ಕಳಂತೆ ಪೋಷಿಸುವುದು ಅಷ್ಟೇ ಮುಖ್ಯ ಎಂಬುದನ್ನು ಇಲ್ಲಿನ ಸ್ವಯಂಸೇವಕರು ಸಾಬೀತುಪಡಿಸಿದ್ದಾರೆ. ಸ್ವಚ್ಛ ಪರಿಸರ ಮತ್ತು ಹಚ್ಚಹಸಿರಿನ ಈ ತಾಣ ಮುಂದಿನ ಪೀಳಿಗೆಗೆ ಮಾದರಿಯಾಗಿದೆ.
ಈ ಸಂದರ್ಭದಲ್ಲಿ, ಹಸಿರು ಯೋಧರು, ಅದಮ್ಯ ಚೇತನ ಸಿಬ್ಬಂದಿಗಳು, ಸ್ವಯಂಸೇವಕರು, ಪರಿಸರ ಪ್ರೇಮಿಗಳು ಮತ್ತು ಸ್ಥಳೀಯ ನಾಗರಿಕರು ಸಕ್ರಿಯವಾಗಿ ಭಾಗವಹಿಸಿದ್ದರು.



