Adamya Green #528
“ಹಸಿರ ಪಯಣದ ಸ್ಮರಣೀಯ ಮೈಲಿಗಲ್ಲು: 528ನೇ ಹಸಿರು ಭಾನುವಾರ ಮತ್ತು 50ನೇ ಊಟಾ ಫ್ರಮ್ ಯುವರ್ ಥೋಟಾ ಸಂಭ್ರಮ”
ದಿನಾಂಕ 08 ಫೆಬ್ರವರಿ 2026ರ ಭಾನುವಾರ, ಗಂಗಾನಗರದ ಸೈನ್ಸ್ ಗ್ಯಾಲರಿಯ ಆವರಣವು ಪರಿಸರ ಸ್ನೇಹಿ ಚಟುವಟಿಕೆಗಳಿಗೆ ಸಾಕ್ಷಿಯಾಯಿತು. ನಿರಂತರವಾಗಿ ನಡೆಯುತ್ತಿರುವ 528ನೇ ಹಸಿರು ಭಾನುವಾರದ ಜೊತೆಗೆ, ಸುವರ್ಣ ಸಂಭ್ರಮದ 50ನೇ ‘ಊಟಾ ಫ್ರಮ್ ಯುವರ್ ಥೋಟಾ’ ಕಾರ್ಯಕ್ರಮವು ಯಶಸ್ವಿಯಾಗಿ ನೆರೆವೇರಿತು.
ಮನೆಯ ಕೈತೋಟದ ತಾಜಾ ಆಹಾರದ ಸವಿ, ಆರೋಗ್ಯದ ಗುಟ್ಟು ಮತ್ತು ಪರಿಸರ ಉಳಿಸುವ ಸಂಕಲ್ಪದ ಬಗ್ಗೆ ನಡೆದ ಸಂವಾದಗಳು ಹೊಸ ಆಶಾವಾದ ಮೂಡಿಸಿದವು. ನಮ್ಮ ಹಸಿರು ಪಯಣ ನಿಲ್ಲದು; ಪ್ರತಿ ಭಾನುವಾರ ಹೊಸ ಚೈತನ್ಯದೊಂದಿಗೆ ಈ ಹಾದಿ ಮುಂದುವರಿಯುವುದು. ಬೆಂಗಳೂರನ್ನು ನಂದನವನವಾಗಿಸುವ ನಮ್ಮ ಈ ಉದ್ದೇಶಕ್ಕೆ ನಿಮ್ಮ ಬೆಂಬಲ ಸದಾ ಇರಲಿ.
ಬನ್ನಿ, 529ನೇ ಹಸಿರು ಭಾನುವಾರದಂದು ಮತ್ತೆ ಭೇಟಿಯಾಗೋಣ!




