Adamya Chetana

Adamya Green #523

 
 

“ಪ್ರಕೃತಿಯೇ ನಮ್ಮ ಉಸಿರು : ಸಂರಕ್ಷಣೆಯೇ ಹೊಸ ವರ್ಷದ ಉಡುಗೊರೆ”

ಹೊಸ ವರ್ಷದ ಸಂಭ್ರಮವನ್ನು ಅರ್ಥಪೂರ್ಣವಾಗಿಸುವ ನಿಟ್ಟಿನಲ್ಲಿ, ಅದಮ್ಯ ಚೇತನದ 523ನೇ ‘ಹಸಿರು ಭಾನುವಾರ’ ಕಾರ್ಯಕ್ರಮವು ಬೆಂಗಳೂರಿನ ಬಸವನಗುಡಿ, ಬಿ.ಪಿ. ವಾಡಿಯಾ ರಸ್ತೆಯಲ್ಲಿರುವ ಅನಂತವನದ ಆವರಣದಲ್ಲಿ ಯಶಸ್ವಿಯಾಗಿ ನೆರವೇರಿತು.

ಆಚರಣೆ ಎಂದರೆ ಕೇವಲ ಸಡಗರವಲ್ಲ, ಅದು ಪ್ರಕೃತಿಯ ಮೇಲಿನ ಜವಾಬ್ದಾರಿ ಎಂಬ ಸಂದೇಶದೊಂದಿಗೆ ಆರಂಭವಾದ ಈ ದಿನ, ಅನಂತವನದ ಹಸಿರನ್ನು ಮತ್ತಷ್ಟು ಗಟ್ಟಿಗೊಳಿಸಿತು. ಅನಂತವನದಲ್ಲಿ ಹಸಿರು ಯೋಧರು ಒಂದಾಗಿ ಸಸಿಗಳಿಗೆ ನೀರುಣಿಸಿ, ಪೋಷಣೆಯ ಹೊಣೆ ಹೊತ್ತರು. ಕಸಮುಕ್ತ ಅಭಿಯಾನದ ಮೂಲಕ ಪರಿಸರ ಸಮತೋಲನಕ್ಕೆ ಭರವಸೆಯ ಹೆಜ್ಜೆ ಇಡಲಾಯಿತು.

ಈ ಸಂದರ್ಭದಲ್ಲಿ, ಹಸಿರು ಯೋಧರು, ಅದಮ್ಯ ಚೇತನ ಸಿಬ್ಬಂದಿಗಳು, ಸ್ವಯಂಸೇವಕರು, ಪರಿಸರ ಪ್ರೇಮಿಗಳು ಮತ್ತು ಸ್ಥಳೀಯ ನಾಗರಿಕರು ಸಕ್ರಿಯವಾಗಿ ಭಾಗವಹಿಸಿದ್ದರು.