Adamya Chetana

Adamya Green #521

 

“ಪರಿಸರ ಸಂರಕ್ಷಣೆಯ ನಿರಂತರ ಪಯಣ – 521ನೇ ಹಸಿರು ಭಾನುವಾರ!”

ಅದಮ್ಯ ಚೇತನದ ಪರಿಸರ ಅಭಿಯಾನದ ಮೈಲಿಗಲ್ಲಾದ 521ನೇ ‘ಹಸಿರು ಭಾನುವಾರ’ ಕಾರ್ಯಕ್ರಮವು ದಿನಾಂಕ 21 ಡಿಸೆಂಬರ್ 2025 ರಂದು ನೆಲಮಂಗಲದ ಶಿವನಪುರದಲ್ಲಿರುವ ನೆಮ್ಮದಿ ಉಪಶಾಮಕ ಆರೈಕೆ ಕೇಂದ್ರದ ಆವರಣದಲ್ಲಿ ಅತ್ಯಂತ ಯಶಸ್ವಿಯಾಗಿ ನೆರವೇರಿತು.

ಇದೇ ಸುಸಂದರ್ಭದಲ್ಲಿ ನೆಮ್ಮದಿ ಉಪಶಾಮಕ ಆರೈಕೆ ಕೇಂದ್ರದ ನೂತನ ಕಟ್ಟಡದ ಉದ್ಘಾಟನೆಯೂ ಸಹ ಸಂಪನ್ನವಾಯಿತು. ಪರಿಸರ ಸಂರಕ್ಷಣೆ, ಹಸಿರು ಜಾಗೃತಿ ಮತ್ತು ಸಾಮಾಜಿಕ ಹೊಣೆಗಾರಿಕೆಯ ಮಹತ್ ಉದ್ದೇಶದೊಂದಿಗೆ ಆಯೋಜಿಸಲಾಗಿದ್ದ ಈ ಅಭಿಯಾನದಲ್ಲಿ ಸ್ವಯಂಸೇವಕರು, ಸ್ಥಳೀಯ ನಾಗರಿಕರು ಹಾಗೂ ಪರಿಸರ ಪ್ರೇಮಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಸಸಿಗಳನ್ನು ನೆಡುವ ಮೂಲಕ ಕಾರ್ಯಕ್ರಮಕ್ಕೆ ಅರ್ಥಪೂರ್ಣ ಮೆರುಗು ನೀಡಿದರು.
ಹಸಿರು ಭಾನುವಾರವು ತನ್ನ ನಿರಂತರತೆಯ ಮೂಲಕ ಪರಿಸರ ಕಾಳಜಿ ಮತ್ತು ಸಮಾಜ ಸೇವೆಯ ಸಕಾರಾತ್ಮಕ ಸಂದೇಶವನ್ನು ನಾಡಿನಾದ್ಯಂತ ಸಾರುತ್ತಿದೆ.