Adamya Green #520
ಅದಮ್ಯ ಚೇತನದ ಪರಿಸರ ಪರಿಕಲ್ಪನೆಯಾದ ಹಸಿರು ಭಾನುವಾರವು ಡಿಸೆಂಬರ್ 14 ರಂದು ತನ್ನ 520ನೇ ಮೈಲಿಗಲ್ಲನ್ನು ತಲುಪಿದೆ!
ಈ ವಿಶೇಷ ಕಾರ್ಯಕ್ರಮವು ರಾಷ್ಟ್ರೀಯ ಅಂಧರ ಸಂಘ, ಜೀವನಭೀಮನಗರ, ಬೆಂಗಳೂರು ಇಲ್ಲಿ ಯಶಸ್ವಿಯಾಗಿ ನೆರವೇರಿತು. 120ಕ್ಕೂ ಹೆಚ್ಚು ಮಂದಿ ಒಂದಾಗಿ ಸೇರಿ 25 ಗಿಡಗಳನ್ನು ನೆಟ್ಟು, ಪರಿಸರದತ್ತ ನಮ್ಮ ಹೊಣೆಗಾರಿಕೆಯನ್ನು ವ್ಯಕ್ತಪಡಿಸಲಾಯಿತು. ವಿಶೇಷವಾಗಿ ದೃಷ್ಟಿಹೀನರು ಹಾಗೂ ಶ್ರವಣ–ಮಾತಿನ ಅಸಮರ್ಥತೆಯುಳ್ಳ ವಿಶೇಷ ಯುವಕರ ಉತ್ಸಾಹಭರಿತ ಭಾಗವಹಿಸುವಿಕೆ ಈ ಕಾರ್ಯಕ್ರಮಕ್ಕೆ ಹೊಸ ಅರ್ಥ ನೀಡಿತು.
ಭೂಮಿಯನ್ನು ಕಾಪಾಡುವುದು ಎಲ್ಲರ ಜವಾಬ್ದಾರಿ ಎಂಬ ಸಂದೇಶವನ್ನು ಈ ಹಸಿರು ಭಾನುವಾರ ಸರಳವಾಗಿ ಮತ್ತು ಅರ್ಥಪೂರ್ಣವಾಗಿ ಸಾರಿತು
ಈ ಸಂದರ್ಭದಲ್ಲಿ, ಅದಮ್ಯ ಚೇತನದ ಅಧ್ಯಕ್ಷರಾದ ಡಾ. ತೇಜಸ್ವಿನಿ ಅನಂತ್ ಕುಮಾರ್, ಹಸಿರು ಯೋಧರು, ಅದಮ್ಯ ಚೇತನ ಸಿಬ್ಬಂದಿಗಳು, ಸ್ವಯಂಸೇವಕರು, ಪರಿಸರ ಪ್ರೇಮಿಗಳು ಮತ್ತು ಸ್ಥಳೀಯ ನಾಗರಿಕರು ಸಕ್ರಿಯವಾಗಿ ಭಾಗವಹಿಸಿದ್ದರು.




