Adamya Chetana

Adamya Green #514

 
“ನಾಡಿಗೆ ದೀಪ ಹಚ್ಚುವ ಜೊತೆಗೆ ಪ್ರಕೃತಿ ಮಾತೆಗೆ ಜೀವ ತುಂಬುವ ಕಾರ್ಯಕ್ರಮ: ಹಸಿರು ಭಾನುವಾರದ 514ನೇ ಯಶಸ್ವಿ ಹೆಜ್ಜೆ!”
ಕನ್ನಡ ರಾಜ್ಯೋತ್ಸವವನ್ನು ಕೇವಲ ಸಾಂಸ್ಕೃತಿಕ ಚಟುವಟಿಕೆಗಳಿಗೆ ಸೀಮಿತಗೊಳಿಸದೆ, ಪರಿಸರ ಸಂರಕ್ಷಣೆಯ ಮಹತ್ಕಾರ್ಯದ ಮೂಲಕ ನವೆಂಬರ್ 02, 2025 ರಂದು, ವಾಜರಹಳ್ಳಿಯ BCCHS ಲೇಔಟ್‌ನಲ್ಲಿ ಅದಮ್ಯ ಚೇತನದ 514ನೇ ಹಸಿರು ಭಾನುವಾರ ಕಾರ್ಯಕ್ರಮವು ಯಶಸ್ವಿಯಾಗಿ ನೆರೆವರಿತು.
ಪರಿಸರ ಸಂರಕ್ಷಣೆ ಎಂಬ ಮಹತ್ತರ ಹೋರಾಟದಲ್ಲಿ, ಪ್ರತಿಯೊಬ್ಬರೂ ಕೈಜೋಡಿಸಿದಾಗ ಮಾತ್ರ ನಿಜವಾದ ಬದಲಾವಣೆ ಸಾಧ್ಯ. ಹಸಿರು ಭಾನುವಾರದಂತಹ ಉದ್ದೇಶಪೂರಿತ ಯೋಜನೆಗಳು ಜನರ ಸಹಭಾಗಿತ್ವದಿಂದಲೇ ಬೆಳೆಯುತ್ತವೆ, ಹರಡುತ್ತವೆ, ಜೀವಂತವಾಗುತ್ತವೆ.
ಮಕ್ಕಳಿಂದ ಹಿಡಿದು ಹಿರಿಯರ ತನಕ ಎಲ್ಲರೂ ಭಾಗವಹಿಸಿದ್ದು, ಹಸಿರು ಸಂಸ್ಕೃತಿ ಪೀಳಿಗೆಗಳಿಂದ ಪೀಳಿಗೆಗೆ ಸಾಗಬೇಕು ಎಂಬ ಸಂದೇಶವನ್ನು ಬಲಪಡಿಸಿತು.
ಬದಲಾವಣೆ ನಮ್ಮಿಂದಲೇ ಆರಂಭವಾಗಲಿ. ಈ ಮಹತ್ತರ ಕಾರ್ಯಕ್ಕೆ ನಮ್ಮೊಂದಿಗೆ ಪಾಲ್ಗೊಂಡ ಎಲ್ಲಾ ಹಸಿರು ಸ್ವಯಂಸೇವಕರಿಗೆ ಧನ್ಯವಾದಗಳು.
ಈ ಸಂದರ್ಭದಲ್ಲಿ, ಅದಮ್ಯ ಚೇತನದ ಅಧ್ಯಕ್ಷರಾದ ಡಾ. ತೇಜಸ್ವಿನಿ ಅನಂತ್ ಕುಮಾರ್, ಹಸಿರು ಯೋಧರು, ಅದಮ್ಯ ಚೇತನ ಸಿಬ್ಬಂದಿಗಳು, ಸ್ವಯಂಸೇವಾ ಕಾರ್ಯಕರ್ತರು, ಪರಿಸರ ಸ್ನೇಹಿಗಳು ಹಾಗೂ ಸ್ಥಳೀಯರು ಪಾಲ್ಗೊಂಡಿದ್ದರು.