Adamya Green #490
ಅದಮ್ಯ ಚೇತನದ 490ನೇ ಹಸಿರು ಭಾನುವಾರ ಕಾರ್ಯಕ್ರಮವು ಅದಮ್ಯ ಚೇತನದ ಎದುರು ಇರುವ ಮಗಜಿ ಕಾರ್ತಿಕ್ ಕಲ್ಯಾಣ ಮಂಟಪದ ಆವರಣದಲ್ಲಿ ಯಶಸ್ವಿಯಾಗಿ ನೆರವೇರಿತು.
ಕಾರ್ಯಕ್ರಮದ ಅಂಗವಾಗಿ, ಸ್ಥಳವನ್ನು ಸ್ವಚ್ಛಗೊಳಿಸಿ, ವಿವಿಧ ಜಾತಿಯ ಗಿಡಗಳನ್ನು ನೆಡುವ ಮೂಲಕ ಪರಿಸರ ಸಂರಕ್ಷಣೆಗೆ ಮತ್ತೊಂದು ಹೆಜ್ಜೆ ಇಡಲಾಯಿತು. ಈ ಬಗೆಯ ಹಸಿರು ಚಟುವಟಿಕೆಗಳು ಜನರಲ್ಲಿ ಪರಿಸರ ಭಾವನೆ ಬೆಳೆಸಲಿ ಮತ್ತು ಭವಿಷ್ಯದ ತಲೆಮಾರಿಗೆ ಪ್ರೇರಣೆಯಾಗಲಿ.
ಈ ಸಂದರ್ಭದಲ್ಲಿ, ಹಸಿರು ಯೋಧರು, ಅದಮ್ಯ ಚೇತನ ಸಿಬ್ಬಂದಿಗಳು, ಸ್ವಯಂಸೇವಾ ಕಾರ್ಯಕರ್ತರು, ಪರಿಸರ ಸ್ನೇಹಿಗಳು ಹಾಗೂ ಸ್ಥಳೀಯರು ಪಾಲ್ಗೊಂಡಿದ್ದರು.



