Adamya Green #487
ಅದಮ್ಯ ಚೇತನದ 487ನೇ ಹಸಿರು ಭಾನುವಾರ – ಪರಿಸರ ಸಂರಕ್ಷಣೆ ಮತ್ತು ಸಾಮಾಜಿಕ ಜವಾಬ್ದಾರಿಯ ಜಾಗೃತಿ
ಗವಿಪುರಂನ ಗವಿ ಗಂಗಾಧರೇಶ್ವರ ದೇವಸ್ಥಾನದ ಆವರಣದಲ್ಲಿ, ಹಸಿರು ಭಾನುವಾರ ಕಾರ್ಯಕ್ರಮವು ಯಶಸ್ವಿಯಾಗಿ ನೆರೆವೇರಿತು. ವೃಕ್ಷಾರೋಪಣಾ ಅಭಿಯಾನ, ಸ್ವಚ್ಛತಾ ಕಾರ್ಯಕ್ರಮ ಹಾಗೂ ಪರಿಸರ ಜಾಗೃತಿ ಚಟುವಟಿಕೆಗಳಲ್ಲಿ ಎಲ್ಲರೂ ಉತ್ಸಾಹದಿಂದ ಪಾಲ್ಗೊಂಡರು.
ಹಸಿರಿನ ಕನಸು ಸಾಕಾರವಾಗಲಿ ಎಂಬ ಆಶಯದಿಂದ ಈ ದಿವಸವು ಸ್ಮರಣೀಯವಾಗಿತ್ತು. ಹಸಿರು ಯೋಧರು, ಅದಮ್ಯ ಚೇತನ ತಂಡ, ಸ್ವಯಂಸೇವಕರು, ಪರಿಸರ ಪ್ರೇಮಿಗಳು ಮತ್ತು ಸ್ಥಳೀಯ ನಾಗರಿಕರು ಈ ಕಾರ್ಯದಲ್ಲಿ ಭಾಗವಹಿಸಿದ್ದರು.


