Adamya Green #555
ನಮ್ಮ ಭಾನುವಾರ… ಹಸಿರಿಗಾಗಿ!
ಅದಮ್ಯ ಚೇತನದ 555ನೇ ಹಸಿರು ಭಾನುವಾರವು ಕೋರಮಂಗಲದ 5ನೇ ಬ್ಲಾಕ್ ಪಾರ್ಕ್ನಲ್ಲಿ ಅತ್ಯಂತ ಯಶಸ್ವಿಯಾಗಿ ನೆರವೇರಿತು!
ಈ ಬಾರಿಯ ವಿಶೇಷವೆಂದರೆ, The Times of India (#IamBengaluru – Volunteer for Parks) ಮತ್ತು ಕ್ರಿಸ್ತು ಜಯಂತಿ ಕಾಲೇಜು (Kristu Jayanti College) ಸಹಯೋಗದೊಂದಿಗೆ ಹಲವು ಪರಿಸರ ಪ್ರೇಮಿಗಳು, ಸ್ವಯಂಸೇವಕರು ಹಾಗೂ ಸ್ಥಳೀಯರು ಹಾಗೂ ಪುಟ್ಟ ಮಕ್ಕಳು ಉತ್ಸಾಹದಿಂದ ಭಾಗವಹಿಸಿ, ಗಿಡ ನೆಡುವುದು, ಉದ್ಯಾನವನದ ಹಸಿರನ್ನು ಸಂರಕ್ಷಿಸುವುದು ಹಾಗೂ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಡುವ ಕಾರ್ಯದಲ್ಲಿ ಕೈಜೋಡಿಸಿ ಹಸಿರಿನ ಸಂರಕ್ಷಣೆಗೆ ತಮ್ಮ ಕೊಡುಗೆ ನೀಡಿದರು.
ಒಂದು ಗಂಟೆಯ ನಮ್ಮ ಸಾರ್ಥಕ ಪ್ರಯತ್ನ — ಮುಂದಿನ ಹಲವು ವರ್ಷಗಳ ಹಸಿರು ಭವಿಷ್ಯಕ್ಕೆ ಒಂದು ಸುಂದರ ಹೆಜ್ಜೆ.
ಸ್ವಚ್ಛತೆ, ಹಸಿರು ಮತ್ತು ಪರಿಸರ ಸಂರಕ್ಷಣೆಯ ಸಂದೇಶವನ್ನು ಮತ್ತಷ್ಟು ಜನರಿಗೆ ತಲುಪಿಸುವ ಈ ಪಯಣದಲ್ಲಿ ನಮ್ಮೊಂದಿಗೆ ಕೈಜೋಡಿಸಿದ ಪ್ರತಿಯೊಬ್ಬರಿಗೂ ಅದಮ್ಯ ಚೇತನದ ಹೃತ್ಪೂರ್ವಕ ಧನ್ಯವಾದಗಳು!
ಹಸಿರು ಬೆಳೆಸೋಣ… ಸ್ವಚ್ಛತೆ ಕಾಪಾಡೋಣ… ಮುಂದಿನ ಪೀಳಿಗೆಗೆ ಸುಂದರ ಭವಿಷ್ಯ ಕಟ್ಟೋಣ!
#AdamyaChetana #GreenSunday #AdarshChetana #HasiruBhanuvara #555thGreenSunday #GoGreen #PlantForFuture #GreenBengaluru #Environment #ಅದಮ್ಯಚೇತನ #ಹಸಿರುಭಾನುವಾರ #ನಮ್ಮಭಾನುವಾರಹಸಿರಿಗಾಗಿ #ಹಸಿರುನಾಳೆ




