Adamya Green #519
“ಅದಮ್ಯ ಚೇತನದ 519ನೇ ಹಸಿರು ಭಾನುವಾರ – ಪ್ರಕೃತಿ ಸಂರಕ್ಷಣೆಯತ್ತ ನಮ್ಮ ಪ್ರಯತ್ನ”
ಡಿಸೆಂಬರ್ 07, 2025 ರಂದು ಬೆಂಗಳೂರಿನ ಬಸವನಗುಡಿ, ಬಿ.ಪಿ. ವಾಡಿಯಾ ರಸ್ತೆಯಲ್ಲಿರುವ ಅನಂತವನದಲ್ಲಿ ಅದಮ್ಯ ಚೇತನದ 519ನೇ ‘ಹಸಿರು ಭಾನುವಾರ’ ಕಾರ್ಯಕ್ರಮವು ಅತ್ಯಂತ ಯಶಸ್ವಿಯಾಗಿ ನೆರವೇರಿತು.
ಅನಂತವನ ಆವರಣದಲ್ಲಿ ಪರಿಸರ ಸಮತೋಲನವನ್ನು ವೃದ್ಧಿಸುವ ಉದ್ದೇಶದಿಂದ ವಿವಿಧ ಸ್ಥಳೀಯ ಸಸಿಗಳನ್ನು ನೆಡಲಾಗಿದ್ದು, ಈಗಾಗಲೇ ನೆಡಲಾದ ಸಸಿಗಳಿಗೆ ನೀರುಣಿಸಿ ಅವುಗಳ ರಕ್ಷಣೆಗೆ ಅಗತ್ಯ ವ್ಯವಸ್ಥೆಗಳನ್ನು ಮಾಡಲಾಯಿತು. ಜೊತೆಗೆ, ತ್ಯಾಜ್ಯಮುಕ್ತ ಹಾಗೂ ಸ್ವಚ್ಛ ಪರಿಸರವನ್ನು ನಿರ್ಮಿಸುವ ನಿಟ್ಟಿನಲ್ಲಿ ಸ್ವಚ್ಛತಾ ಕಾರ್ಯಗಳನ್ನು ಕೈಗೊಳ್ಳಲಾಯಿತು.
ಈ ಮೂಲಕ ಅನಂತವನವನ್ನು ಇನ್ನಷ್ಟು ಹಸಿರು ಹಾಗೂ ಆರೋಗ್ಯಕರ ಪರಿಸರವಾಗಿಸಲು ಹಸಿರು ಭಾನುವಾರವು ಇನ್ನೊಂದು ಅರ್ಥಪೂರ್ಣ ಹೆಜ್ಜೆ ಇಟ್ಟಿತು.
ಈ ಸಂದರ್ಭದಲ್ಲಿ, ಹಸಿರು ಯೋಧರು, ಅದಮ್ಯ ಚೇತನ ಸಿಬ್ಬಂದಿಗಳು, ಸ್ವಯಂಸೇವಕರು, ಪರಿಸರ ಪ್ರೇಮಿಗಳು ಮತ್ತು ಸ್ಥಳೀಯ ನಾಗರಿಕರು ಸಕ್ರಿಯವಾಗಿ ಭಾಗವಹಿಸಿದ್ದರು.




