Adamya Green #515
“ಅದಮ್ಯ ಚೇತನದ 515ನೇ ಹಸಿರು ಭಾನುವಾರ : ಮುಂದಿನ ಪೀಳಿಗೆಗೆ ಹಸಿರಿನ ಉಡುಗೊರೆ”
ಅದಮ್ಯ ಚೇತನದ 515ನೇ ಹಸಿರು ಭಾನುವಾರದ ಕಾರ್ಯಕ್ರಮವು ನವೆಂಬರ್ 09 ರಂದು ಜಿಂಕೆ ಪಾರ್ಕ್, ಲಕ್ಷ್ಮೀಪುರ ಮುಖ್ಯ ರಸ್ತೆ, ಹನುಮಂತನಗರ, ಬೆಂಗಳೂರು ಇಲ್ಲಿ ಯಶಸ್ವಿಯಾಗಿ ನೆರೆವೇರಿತು.
ಗಿಡಗಳ ಆರೈಕೆ, ಬೆಳವಣಿಗೆ ಮತ್ತು ಪರಿಸರ ಸಂರಕ್ಷಣೆಗೆ ಉತ್ತೇಜನ ನೀಡುವ ಈ ಕಾರ್ಯವು, ಪ್ರಕೃತಿಯತ್ತ ನಮ್ಮ ಜವಾಬ್ದಾರಿಯನ್ನು ಸ್ಪಷ್ಟವಾಗಿ ಪ್ರತಿಬಿಂಬಿಸಿತು. ಮಕ್ಕಳು, ಯುವಕರು ಮತ್ತು ಹಿರಿಯರು ಸಕ್ರಿಯವಾಗಿ ಭಾಗವಹಿಸಿದುದು, ಹಸಿರು ಸಂಸ್ಕೃತಿಯನ್ನು ಪೀಳಿಗೆಗಳಿಂದ ಪೀಳಿಗೆಗಳಿಗೆ ಕಾಪಾಡಿ ಸಾಗಿಸುವ ಅಗತ್ಯವನ್ನು ಮತ್ತಷ್ಟು ಬಲಪಡಿಸಿತು.
ಈ ಸಂದರ್ಭದಲ್ಲಿ, ಬಸವನಗುಡಿ ಶಾಸಕರಾದ ಶ್ರೀ ಎಲ್ .ಎ. ರವಿ ಸುಬ್ರಹ್ಮಣ್ಯ
ಅವರು, ಅನೇಕ ಹಸಿರು ಯೋಧರು, ಸಂಸ್ಥೆಯ ಸಿಬ್ಬಂದಿಗಳು, ಸ್ವಯಂಸೇವಕರು, ಪರಿಸರ ಪ್ರೇಮಿಗಳು ಮತ್ತು ಸ್ಥಳೀಯ ನಾಗರಿಕರು ಉತ್ಸಾಹಭರಿತವಾಗಿ ಭಾಗವಹಿಸಿದ್ದರು.



