Adamya Green #513
ಅದಮ್ಯ ಚೇತನದ 513ನೇ ‘ಹಸಿರು ಭಾನುವಾರ’ – ಹಸಿರಿನ ಹಬ್ಬದ ಸಂಭ್ರಮ!
ಉತ್ತರಿ ಶಂಕರ ಮಠ, ಕಗ್ಗಲಿಪುರ, ಕನಕಪುರ ರಸ್ತೆಯ ಸೊಬಗುಮಯ ವಾತಾವರಣದಲ್ಲಿ ಅದಮ್ಯ ಚೇತನದ 513ನೇ ‘ಹಸಿರು ಭಾನುವಾರ’ ಕಾರ್ಯಕ್ರಮವು ಯಶಸ್ವಿಯಾಗಿ ನರೆವೇರಿತು.
ಹಸಿರು ಭಾನುವಾರದಂತಹ ಪರಿಸರ ಸ್ನೇಹಿ ಚಳವಳಿಗಳ ನಿಜವಾದ ಶಕ್ತಿ ಜನರ ಒಗ್ಗಟ್ಟಿನಲ್ಲಿ ಅಡಗಿದೆ. ಪ್ರತಿಯೊಬ್ಬರೂ ಒಂದು ಗಿಡವನ್ನು ನೆಟ್ಟು, ಒಂದು ಹೆಜ್ಜೆ ಮುಂದಿಟ್ಟಾಗಲೇ ಪರಿಸರ ಸಂರಕ್ಷಣೆಯ ದೀಪ ಬೆಳಗುತ್ತದೆ.
ಈ ಹಸಿರು ಯಾತ್ರೆಯಲ್ಲಿ ಹಸಿರು ಯೋಧರು, ಅದಮ್ಯ ಚೇತನ ಸಿಬ್ಬಂದಿಗಳು, ಸ್ವಯಂಸೇವಾ ಕಾರ್ಯಕರ್ತರು, ಪರಿಸರ ಸ್ನೇಹಿಗಳು ಹಾಗೂ ಸ್ಥಳೀಯರು ಪಾಲ್ಗೊಂಡಿದ್ದರು.



