Adamya Green #554
ಭೂಮಿಯಿಂದ ನಾವು ಎಲ್ಲವನ್ನೂ ಪಡೆದಿದ್ದೇವೆ, ಆದರೆ ತಿರುಗಿ ಕೊಡುತ್ತಿರುವುದಾದರೂ ಏನು?
ಬೆಂಗಳೂರಿನ ಬಿಡಿಎ 6ನೇ ಹಂತ, 10ನೇ ಬ್ಲಾಕ್ ನ ಕನಕಭವನದ ಹಿಂಭಾಗದಲ್ಲಿರುವ ಬಿಡಿಎ ಪಾರ್ಕ್ನಲ್ಲಿ ಹಮ್ಮಿಕೊಳ್ಳಲಾಗಿದ್ದ ಅದಮ್ಯ ಚೇತನದ 554ನೇ ಹಸಿರು ಭಾನುವಾರ ಕಾರ್ಯಕ್ರಮವು ಅತ್ಯಂತ ಯಶಸ್ವಿಯಾಗಿ ನೆರವೇರಿತು.
ತಮ್ಮ ಬಿಡುವಿಲ್ಲದ ದಿನಚರಿಯ ನಡುವೆಯೂ ಸಮಯ ಮೀಸಲಿಟ್ಟು ಬಂದವರು, ಕೈಯಾರೆ ಮಣ್ಣು ಮುಟ್ಟಿ ಸಸಿ ನೆಟ್ಟವರು, ಪ್ರೀತಿಯಿಂದ ನೀರುಣಿಸಿದವರು… ನಿಮ್ಮ ಈ ಪುಟ್ಟ ಪ್ರಯತ್ನ ನಾಳೆ ಯಾರಿಗೋ ಶುದ್ಧ ಗಾಳಿಯಾಗಬಹುದು, ಯಾವುದೋ ಹಕ್ಕಿಗೆ ಗೂಡಾಗಬಹುದು!
ನಮ್ಮ ಈ ಹಸಿರು ಪಯಣ ಇಲ್ಲಿಗೆ ನಿಲ್ಲುವುದಿಲ್ಲ…
ಸಸಿ ನೆಡುವುದು ನಮ್ಮ ಮೊದಲ ಹೆಜ್ಜೆಯಾದರೆ, ಅದನ್ನು ಮರವಾಗಿಸಿ ಬೆಳೆಸುವುದು ನಮ್ಮ ನಿರಂತರ ಜವಾಬ್ದಾರಿ.
#ಅದಮ್ಯಚೇತನ #554ನೇಹಸಿರುಭಾನುವಾರ #AdamyaChetana #GreenSunday554 #GreenBengaluru #EcoWarriors #GoGreen #GrowTrees #TogetherForNature #SaveTrees




