Ananth Prerana Kendra

Loctaion: South End Circle, 14th Cross Rd, next to La Marvella Hotel, 2nd Block, Jayanagar, Bengaluru, Karnataka 560011

Ananth Prerana Kendra and its relevance

 1. Shri AnanthKumar: He was a role model for aspiring leaders. He put the nation above himself and the party and worked
  tirelessly till the very end.
 2. He worked for the development of our nation, the state of Karnataka, Bengaluru and for the very last person in the line…
 3. Such leaders should be an inspiration to all emerging leaders and in fact to everyone across all walks of life if our great nation has to achieve its fullest potential.
 4. And this Ananth Prerana Kendra will and should do exactly that. Inspire everyone to strive to become a better image of themselves and follow in the footsteps of tall leaders like Shri AnanthKumar in the service of our nation
 5. Adamya Chetana, which Shri AnanthKumar founded has set up this inspiration centre as a tribute to its chief patron.
 6. Any sphere he touched, be it in the government – Civil Aviation, Youth Affairs, Sports, Culture, Chemicals & Fertilizers, Parliamentary affairs, or in the party organization, or social service – Green Lifestyle and sustainability, he left an indelible mark.
 7. Neem coated Urea, cost reduction of cardiac stents, opening up of Indian skies, Green Bengaluru 1:1, … just to name a few
 8. He always stood by his beliefs
  • He believed in Nation first – Party next – self last.
  • He believed in Lord Basaveshwara ji’s ‘Kayakave Kailasa’ (work is worship)
  • He believed in Antyodaya of Pt Deen Dayal Upadhyay
  • He believed in transformative change at scale. e.g., housing for the poor in urban areas or villages, a mid-day meal program through Adamya Chetana
 9. All these qualities, make him a leader par excellence. Someone who can serve as a role model for youngsters aspiring to be leaders – not just in public life but in any sphere.
 10. More and more youngsters should get involved in public life, social work and nation-building learning from the life journey of AnanthKumar.
 11. His key qualities – kartrutva, vyaktitva and netrutva – combined with Nation-First and Antyodaya

ಅನಂತ ಪ್ರೇರಣಾ ಕೇಂದ್ರಕ್ಕೆ ಸ್ವಾಗತ

ಅನಂತಕುಮಾರ್- ದೇಶವು ಕಂಡ ಅಪರೂಪದ ಸಜ್ಜನ ರಾಜಕಾರಣಿಗಳಲ್ಲೊಬ್ಬರು. ಸತತ ಆರು ಬಾರಿ ಬೆಂಗಳೂರು ದಕ್ಷಿಣ ಕ್ಷೇತ್ರದಿಂದ ರಾಷ್ಟ್ರದ ಸಂಸತ್ತಿಗೆ ಆಯ್ಕೆಯಾದ ಯಶಸ್ವೀ ಜನನಾಯಕ. ತಮ್ಮ ವ್ಯಕ್ತಿತ್ತ್ವ ಕರ್ತೃತ್ವ ಮತ್ತು ನೇತೃತ್ವಗಳಿಂದ ಸಮಸ್ತ ರಾಷ್ಟ್ರದ ಗಮನ ಸೆಳೆದವರು. ತಮ್ಮ ಮಾರ್ಗದರ್ಶಕರಾದ ಗುರುಹಿರಿಯರಿಂದ ಸತ್ಪಥಗಾಮಿಯೆಂಬ ಪ್ರಶಂಸೆಯನ್ನು ಗಳಿಸಿಕೊಂಡಂತೆಯೇ, ಜನಸಾಮಾನ್ಯರಿಂದಲೂ ಸಕಲರ ಹಿತಾಕಾಂಕ್ಷಿ ನಾಯಕನೆಂಬ ಬೆರಗು ತುಂಬಿದ ಹೊಗಳಿಕೆಗೆ ಪಾತ್ರರಾದವರು. ಪ್ರಗತಿಪಥದಲ್ಲಿ ದೇಶವನ್ನು ಮುನ್ನಡೆಸುವ ಹೊಣೆ ಹೊತ್ತ ಕಾಲದಲ್ಲೇ ಕನ್ನಡನಾಡು ನುಡಿನೆಲಜಲಗಳ ಹಿತವನ್ನು ಕಾಪಾಡಲು ಕಂಕಣಬದ್ಧರಾಗಿ ನಿಂತವರು. ಅಕಾಲದಲ್ಲಿ ನಾಡವರನ್ನು ತೊರೆದು ಹೋದರೂ ತಮ್ಮ ಗುಣಶೀಲಗಳಿಂದ, ನಿತ್ಯನೂತನವಾದ ಕರ್ತೃತ್ವ ಶಕ್ತಿಯಿಂದ, ಸದಾ ಜಾಗೃತವಾಗಿದ್ದ ರಾಷ್ಟ್ರಭಕ್ತಿಯಿಂದ ಎಲ್ಲರಿಗೂ ಮಾದರಿಯಾಗಿ, ಪ್ರೇರಕಶಕ್ತಿಯಾಗಿ ಜನಮನದಲ್ಲಿ ನೆಲೆನಿಂತವರು- ಅನಂತಕುಮಾರ್.

ಅನಂತಕುಮಾರರ ಬದುಕಿನ ಸಾರ್ಥಕತೆಯನ್ನು ಅರಿತವರಿಗೂ, ನಾಯಕತ್ವದ ಬೆಳವಣಿಗೆಯ ರೂಪರೇಷೆಯನ್ನು ಗುರುತಿಸಲೆಳಸುವವರಿಗೂ, ನಾಡ ಸೇವೆಯಲ್ಲಿ ತೊಡಗಿಕೊಳ್ಳಬಯಸುವ ಯುವಶಕ್ತಿಗಳಿಗೂ ದಾರಿದೀಪವಾಗಲೆಂಬ ಮಹದುದ್ದೇಶದಿಂದ ಅನಂತಕುಮಾರರ ಜೀವನ, ವ್ಯಕ್ತಿತ್ವ, ಸಾಧನೆಗಳನ್ನು ಪರಿಚಯಿಸುವ ಮಾಹಿತಿಕೇಂದ್ರವೊಂದನ್ನು ತೆರೆಯಲು. ಅನಂತಕುಮಾರರ ಆಪ್ತರ ಬಳಗವು ಉದ್ದೇಶಿಸಿದೆ. ಇದೀಗ ಲೋಕಾರ್ಪಣೆ್ಗೊಂಡಿರುವ ಈ ಕೇಂದ್ರವೇ ಅನಂತಪ್ರೇರಣಾ ಕೇಂದ್ರ. ಅನಂತಕುಮಾರರ ಆಶೋತ್ತರಗಳನ್ನು ಮುಂದುವರಿಸಿ ನಿರ್ವಹಿಸುವ ಹೊಣೆಹೊತ್ತ ಅದಮ್ಯಚೇತನ ಸಂಸ್ಥೆಯ ಸಹಯೋಗದಲ್ಲಿ ಈ ಕೇಂದ್ರವು ಕಾರ್ಯನಿರ್ವಹಿಸುತ್ತದೆ.

ಬಹುಮುಖೀ ಕರ್ತೃತ್ವಶಾಲಿ ಅನಂತಕುಮಾರ್ ತಮ್ಮ ಸರ್ವತೋಮುಖ ಸಮಾಜಸೇವೆಯ ಸಂಪರ್ಕ ಕಚೇರಿಗಾಗಿ ಏಳೆಂಟು ರಸ್ತೆಗಳು ಕೂಡುವ ಕೇಂದ್ರಸ್ಥಳವಾದ ಸೌತ್ ಎಂಡ್ ವೃತ್ತದಲ್ಲಿರುವ ಕಟ್ಟಡವನ್ನು ಆಯ್ದುಕೊಂಡದ್ದೂ ಸೂಕ್ತವೇ ಆಗಿತ್ತು. ಬೆಂಗಳೂರು ದಕ್ಷಿಣ ಕ್ಷೇತ್ರದ ಸಹಸ್ರಾರು ಮತದಾರರು ತಮ್ಮ ನೆಚ್ಚಿನ ಮುಖಂಡನನ್ನು ಕಾಣಲು, ಭೇಟಿಮಾಡಿ ತಮ್ಮ ಸುಖದುಃಖಗಳನ್ನು ಹಂಚಿಕೊಳ್ಳಲು ಇಲ್ಲಿಗೆ ದಿನನಿತ್ಯ ಬರುತ್ತಿದ್ದರು. ಅನಂತಕುಮಾರರಿಗೆ ಜನನಾಯಕನೆಂಬ ಅನ್ವರ್ಥನಾಮ ಬರಲು ಕಾರಣವಾದ ಈ ಕೇಂದ್ರವು ಇದೀಗ ಅವರ ನಿಧನದ ತರುವಾಯ ನಿರಂತರವಾಗಿ ಅವರ ಸ್ಮರಣೆಗೆ ಅವಕಾಶ ಕಲ್ಪಿಸುವ ತಾಣವಾಗಿರುವುದು ಅತ್ಯಂತ ಸಮಂಜಸವಾಗಿದೆ. ತಮ್ಮ ಬಳಿ ಬಂದವರೆಲ್ಲರ ಕಷ್ಟಕ್ಕೆ ಸದಾ ಸ್ಪಂದಿಸುತ್ತಿದ್ದ, ಸಂಸದರಾಗಿ ಸಚಿವರಾಗಿ ಸದಾ ಸಮಾಜಮುಖೀ ಅಭಿವೃದ್ಧಿಪರ ಕಾರ್ಯಗಳಲ್ಲಿ ತೊಡಗಿರುತ್ತಿದ್ದ ಹಸಿರು ಜೀವನ ಶೈಲಿಯ ಹರಿಕಾರರಾಗಿದ್ದವರು ಅನಂತಕುಮಾರ್. ಅವರ ಬದುಕು ಎಲ್ಲರಿಗೂ ಸಾರ್ಥಕ ಬದುಕಿನೆಡೆಗೆ ಪ್ರೇರಣೆ ನೀಡಲೆಂಬ ಉದ್ದೇಶದಿಂದ ರೂಪುಗೊಂಡಿರುವ ಈ ಕೇಂದ್ರಕ್ಕೆ ಅನಂತ ಪ್ರೇರಣಾ ಕೇಂದ್ರವೆಂದು ಹೆಸರಿಸಿರುವುದೂ ಅರ್ಥಪೂರ್ಣವಾಗಿದೆ.

ಛಾಯಾಚಿತ್ರ ಪ್ರದರ್ಶಿನಿ

ಈ ಪ್ರೇರಣಾ ಕೇಂದ್ರದಲ್ಲಿ ಅನಂತಕುಮಾರ್ ಅವರ ಬಾಲ್ಯದಿಂದ ಮೊದಲುಗೊಂಡು ಎಬಿವಿಪಿ ಕಾರ್ಯಕರ್ತರಾಗಿ ಅವರು ಗಳಿಸಿಕೊಂಡ ಅನುಭವ, ಕರ್ನಾಟಕದಲ್ಲಿ ಭಾರತೀಯ ಜನತಾ ಪಕ್ಷವು ಬೆಳೆಯಲು ಅವರು ದುಡಿದ ಪರಿ, ಆರು ಬಾರಿ ಸಂಸದರಾಗಿ , ಕೇಂದ್ರದಲ್ಲಿ ವಿವಿಧ ಖಾತೆಗಳ ಸಚಿವರಾಗಿ ಅನಂತಕುಮಾರ್ ಸಾಧಿಸಿದ ಕಾರ್ಯಗಳು, ಅಚ್ಚರಿ ಮೂಡಿಸುವಂತೆ ಅವರು ನಾಯಕತ್ವದ ಸೋಪಾನಗಳನ್ನು ಏರಿ ನಿಂತ ರೀತಿ- ಎಲ್ಲವನ್ನೂ ಛಾಯಾಚಿತ್ರಗಳ ಪ್ರದರ್ಶನದ ಮೂಲಕ ಪರಿಚಯಿಸಲಾಗುತ್ತಿದೆ. ಈ ಚಿತ್ರಗಳನ್ನು ಸವಿವರ ಅರ್ಥಮಾಡಿಕೊಳ್ಳಲು ಧ್ವನಿರೂಪದ ವ್ಯಾಖ್ಯಾನವುಳ್ಳ ಮೊಬೈಲ್ ಆಪ್ ಸೌಕರ್ಯವನ್ನೂ ವ್ಯವಸ್ಥೆಮಾಡಲಾಗುತ್ತಿದೆ.

ಗ್ರಂಥಭಂಡಾರ ಮತ್ತು ವಾಚನಾಲಯ

ಅನಂತಪ್ರೇರಣಾ ಕೇಂದ್ರದ ಒಂದು ಭಾಗದಲ್ಲಿ ಸುಸಜ್ಜಿತ ಗ್ರಂಥಭಂಡಾರ ಮತ್ತು ಉಚಿತ ವಾಚನಾಲಯವನ್ನು ವ್ಯವಸ್ಥೆಮಾಡಲಾಗಿದೆ. ಸಾರ್ವಜನಿಕರೂ ವಿದ್ಯಾರ್ಥಿಗಳೂ ಇವುಗಳ ಪ್ರಯೋಜನ ಪಡೆದುಕೊಳ್ಳಬಹುದು. ಇಲ್ಲಿ ಅನಂತಕುಮಾರರ ಸ್ವಂತ ಸಂಗ್ರಹದಿಂದಲೂ ಇತರ ಮೂಲಗಳಿಂದಲೂ ಸಂಗ್ರಹಿಸಿದ ಉಪಯುಕ್ತ ಪುಸ್ತಕಗಳನ್ನು ಇಲ್ಲಿಯೇ ಉಚಿತವಾಗಿ ಅಧ್ಯಯನ ಮಾಡಲು ಅವಕಾಶವಿದೆ. ಮುಂದೆ, ಉದ್ಯೋಗಾಪೇಕ್ಷಿ ವಿದ್ಯಾರ್ಥಿಗಳ ಉಪಯೋಗಕ್ಕಾಗಿ ಸ್ಪರ್ಧಾತ್ಮಕ ಪರೀಕ್ಷಾ ಪುಸ್ತಕಗಳ ಪ್ರತ್ಯೇಕ ವಿಭಾಗವನ್ನು ತೆರೆಯುವ ಉದ್ದೇಶವೂ ಇದೆ.

ವಿದ್ಯಾರ್ಥಿಗಳಿಗೆ ಊಟದ ವ್ಯವಸ್ಥೆ

ಸೌತ್ ಎಂಡ್ ವೃತ್ತದ ಪರಿಸರದಲ್ಲಿ ಅನೇಕ ಶಿಕ್ಷಣಸಂಸ್ಥೆಗಳಿದ್ದು ದೂರದೂರದಿಂದ ಇಲ್ಲಿಗೆ ಪ್ರತಿನಿತ್ಯ ಅನೇಕ ವಿದ್ಯಾರ್ಥಿಗಳು ಬರುತ್ತಾರೆ. ಇವರಲ್ಲಿ ಅನೇಕರಿಗೆ ಮಧ್ಯಾಹ್ನದ ಊಟಕ್ಕೆ ಬೇಕಾದ ಅನುಕೂಲವಿರುವುದಿಲ್ಲ. ಅಂತಹ ವಿದ್ಯಾರ್ಥಿಗಳಿಗೆ ಸಹಾಯವಾಗಲೆಂದು ಅದಮ್ಯ ಚೇತನದ ಸಹಯೋಗದೊಡನೆ ಪ್ರತಿನಿತ್ಯ ಮಧ್ಯಾಹ್ನದ ಭೋಜನವನ್ನು ಉಚಿತವಾಗಿ ನೀಡಲಾಗುತ್ತಿದೆ. ಪ್ರೇರಣಾಕೇಂದ್ರದ ಮೇಲುಮಹಡಿಯ ಆವರಣದಲ್ಲಿ ಊಟದ ವಿತರಣೆಗಾಗಿ ಸೂಕ್ತವ್ಯವಸ್ಥೆ ಕಲ್ಪಿಸಲಾಗಿದೆ.

ಗಿಡ ವಿತರಣೆ

ಸಸ್ಯಾಗ್ರಹ ಎಂಬ ಪರಿಕಲ್ಪನೆಯನ್ನು ಮುಂದಿಟ್ಟು ಅನಂತಕುಮಾರ್ ಬೆಂಗಳೂರು ಹಸಿರು ಪರಿಸರದ ಸ್ವಚ್ಛ ನಗರವಾಗಬೇಕೆಂಬ ಕನಸು ಕಂಡಿದ್ದವರು. ಅವರು ಪ್ರಾರಂಭಿಸಿದ ಹಸಿರು ಭಾನುವಾರ ಎಂಬ ಗಿಡ ನೆಡುವ ಕಾರ್ಯಕ್ರಮ 350 ಕ್ಕೂ ಹೆಚ್ಚು ವಾರಗಳಿಂದ ನಿರಂತರವಾಗಿ ನಡೆದುಬರುತ್ತಿದೆ. ತಮ್ಮ ಆವರಣದಲ್ಲಿ ಗಿಡ ನೆಟ್ಟು ಬೆಳೆಸಲು ಆಸಕ್ತಿಯುಳ್ಳ ಸಾರ್ವಜನಿಕರಿಗೆ ಗಿಡಗಳನ್ನು ಉಚಿತವಾಗಿ ವಿತರಿಸಲು ಪ್ರೇರಣಾ ಕೇಂದ್ರದ ಆವರಣದಲ್ಲಿ ವ್ಯವಸ್ಥೆ ಮಾಡಲಾಗಿದೆ.

ಪ್ಲೇಟ್ ಬ್ಯಾಂಕ್

ಹಸಿರು ಜೀವನ ಶೈಲಿಯ ಪ್ರತಿಪಾದಕರಾದ ಅನಂತಕುಮಾರ್ ಸಭೆ ಸಮಾರಂಭಗಳಲ್ಲಿ ಏಕಬಳಕೆಯ ಪ್ಲಾಸ್ಟಿಕ್ ಖರೀದಿಯನ್ನು ವಿರೋಧಿಸಿ, ಮರುಬಳಸಬಹುದಾದ ಸ್ಟೀಲ್ ಲೋಟ ತಟ್ಟೆ ಚಮಚಗಳ ಬಳಕೆಗೆ ಪ್ರೇರಣೆ ನೀಡಿದ ಫಲವಾಗಿ ಅದಮ್ಯ ಚೇತನದಲ್ಲಿ ಪ್ಲೇಟ್ ಬ್ಯಾಂಕ್ ಯೋಜನೆ ಪ್ರಾರಂಭವಾಗಿದೆ. ಸಾರ್ವಜನಿಕರು ತಾವು ಏರ್ಪಡಿಸುವ ಸಮಾರಂಭಗಳಲ್ಲಿ ಬಳಕೆಗೆ ಇಲ್ಲಿಂದ ಲೋಟ ತಟ್ಟೆಗಳನ್ನು ಉಚಿತವಾಗಿ ಒಯ್ದು ಉಪಯೋಗಿಸಿ ಹಿಂತಿರುಗಿಸಬಹುದಾದ ಷರತ್ತುಬದ್ಧ ಯೋಜನೆ ಇದಾಗಿದೆ. ಪ್ಲೇಟ್ ಬ್ಯಾಂಕಿನ ಒಂದು ಶಾಖೆಯನ್ನು ಪ್ರೇರಣಾ ಕೇಂದ್ರದ ಆವರಣದಲ್ಲಿ ತೆರೆಯಲಾಗಿದೆ.

ಸಂಸ್ಕೃತಿ-ಪರಂಪರೆ ಪ್ರಸಾರ

ಭಾರತೀಯ ಪರಂಪರೆ, ಸಂಸ್ಕೃತಿ, ಕಲೆ ಮೊದಲಾದವುಗಳ ಬಗ್ಗೆ ಅಪಾರ ಆಸಕ್ತಿಯುಳ್ಳವರಾಗಿದ್ದ ಅನಂತಕುಮಾರರ ಆಶಯಕ್ಕನುಗುಣವಾಗಿ ಈ ಪ್ರೇರಣಾ ಕೇಂದ್ರದಲ್ಲಿ ಮುಂಬರುವ ದಿನಗಳಲ್ಲಿ ಸಂಸ್ಕೃತಿ ಘಟಕವೊಂದನ್ನು ಪ್ರಾರಂಭಿಸಲು ಯೋಚಿಸಲಾಗುತ್ತಿದೆ. ಈ ಘಟಕವು ಪರಂಪರೆಯನ್ನು ಬಿಂಬಿಸುವ ಕಾರ್ಯಕ್ರಮಗಳನ್ನು ನಿಯಮಿತವಾಗಿ ಹಮ್ಮಿಕೊಳ್ಳಲು ಅವಕಾಶ ಕಲ್ಪಿಸಲಾಗುವುದು.

ದೇಶೀಯ ಪರಿಸರಸ್ನೇಹಿ ವಸ್ತುಬಳಕೆಗೆ ಪ್ರೋತ್ಸಾಹ

ದೇಶೀಯವೂ ಪರಿಸರಕ್ಕೆ ಪೂರಕವೂ ಮರುಬಳಕೆಗೆ ಅವಕಾಶವೂ ಇರುವಂತಹ ಕಚ್ಚಾವಸ್ತುಗಳಿಂದ ತಯಾರಾದ ಬಟ್ಟೆ ಚೀಲಗಳು ಮತ್ತಿತರ ದಿನನಿತ್ಯದ ಬಳಕೆಯ ಸಾಮಗ್ರಿಗಳ ತಯಾರಿಕೆ ಮತ್ತು ಖರೀದಿಯನ್ನು ಪ್ರೋತ್ಸಾಹಿಸಲು ಅನಂತಪ್ರೇರಣಾಕೇಂದ್ರದ ಆವರಣದಲ್ಲಿ ವಾರಕ್ಕೊಮ್ಮೆ ಅಂತಹ ವಸ್ತುಗಳ ಮಾರಾಟಕೇಂದ್ರವನ್ನು ತೆರೆಯಲು ನಿರ್ಧರಿಸಲಾಗಿದೆ.

ಅನಂತಪ್ರೇರಣಾ ಕೇಂದ್ರಕ್ಕೆ ಭೇಟಿ ಕೊಡಲು,
ಇಲ್ಲಿ ನಡೆಯುವ ಕಾರ್ಯಕ್ರಮಗಳಲ್ಲಿ ಭಾಗವಹಿಸಲು, ಕಾರ್ಯಕ್ರಮಗಳ ಏರ್ಪಾಡಿಗೆ ಸಹಾಯಹಸ್ತ ಚಾಚಲು

ತಮಗೆಲ್ಲ ಸ್ವಾಗತ
ಕೇಂದ್ರವು ವಾರದ ದಿನಗಳಲ್ಲಿ ಬೆಳಗಿನ 9.30 ಗಂಟೆಯಿಂದ ಸಂಜೆ 6.00 ಗಂಟೆಯವರೆಗೆ ತೆರೆದಿರುತ್ತದೆ. ಪ್ರವೇಶ ಉಚಿತ.

Scroll to Top